ಉಡುಪಿ: ಪಡಿತರ ಚೀಟಿಯಿಂದ ಮೃತರ ಹೆಸರು ತೆಗೆಸಲು ಜಿಲ್ಲಾಧಿಕಾರಿ ಸೂಚನೆ
ಉಡುಪಿ, ಎ.24: ಪಡಿತರ ಚೀಟಿಗಳಲ್ಲಿ ಸೇರ್ಪಡೆಗೊಂಡಿರುವ ಯಾವುದೇ ವ್ಯಕ್ತಿ ಮೃತರಾದರೆ ಅಂಥ ವ್ಯಕ್ತಿಗಳ ಹೆಸರುಗಳನ್ನು ಪಡಿತರ ಚೀಟಿಯಿಂದ ತೆಗೆಸುವುದು ಕುಟುಂಬದ ಮುಖ್ಯಸ್ಥರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಯಾವುದೇ ವ್ಯಕ್ತಿ ಮೃತರಾದರೆ ಅಂತಹವರ ಹೆಸರುಗಳನ್ನು ಪಡಿತರ ಚೀಟಿಯಿಂದ ತಕ್ಷಣ ಮರಣ ಪ್ರಮಾಣ ಪತ್ರ ನೀಡಿ ತೆಗೆಸುವಂತೆ ತಿಳಿಸಿದ ಅವರು ಮೃತರ ಹೆಸರುಗಳನ್ನು ಪಡಿತರ ಚೀಟಿಗಳಿಂದ ತಕ್ಷಣ ತೆಗೆಸಿ ಹಾಕದಿದ್ದಲ್ಲಿ ಅವರ ಹೆಸರಿನಲ್ಲಿ ಪಡೆಯುವ ಪಡಿತರ ವಸ್ತುಗಳ ಮೌಲ್ಯ ಗಳನ್ನು ವಸೂಲಿ ಮಾಡುವುದರ ಜೊತೆಗೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





