ವಗ್ಗ ತಾಜುಲ್ ಉಲಮಾ ರಿಲೀಫ್ ಸೆಲ್ ವತಿಯಿಂದ ರಮಝಾನ್ ಕಿಟ್ ವಿತರಣೆ

ಬಂಟ್ವಾಳ: ಎಸ್‌ವೈಎಸ್ ಹಾಗೂ ಎಸ್ಸೆಸ್ಸೆಫ್ ವಗ್ಗ ಯುನಿಟ್ ನ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ತಾಜುಲ್ ಉಲಮಾ ರಿಲೀಫ್ ಸೆಲ್ ವಗ್ಗ ಇದರ ವತಿಯಿಂದ 100 ಕ್ಕೂ ಅಧಿಕ ಬಡ, ಅನಾಥ, ನಿರ್ಗತಿಕ ಕುಟುಂಬಕ್ಕೆ ರಮಝಾನ್ ಸ್ಪೆಶಲ್ ಕಿಟ್ ವಿತರಣೆ ಹಾಗೂ ತಾಜುಶ್ಶರೀಅಃ ಶೈಖುನಾ ಅಲೀ ಕುಂಞ ಉಸ್ತಾದ್ ಅನುಸ್ಮರಣೆ ಇತ್ತೀಚೆಗೆ ವಗ್ಗದಲ್ಲಿ ನಡೆಯಿತು.
ರಿಲೀಫ್ ಚೆಯರ್ಮೇನ್ ವಿ.ಮುಹಮ್ಮದ್ ಇಕ್ಬಾಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕುರ್ನಾಡು ಸಖಾಪಿ ಉಸ್ತಾದ್ ರವರು ಸಭೆಯನ್ನು ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ಸಿರಾಜುದ್ದೀನ್ ಸಖಾಪಿ ಕನ್ಯಾನ ಮುಖ್ಯ ಪ್ರಭಾಷಣ ನಡೆಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಸಅದಿ ಅಗ್ರಹಾರ, ಉದ್ಯಮಿ ಹಾಜಿ ಅಬ್ದುಸ್ಸಮದ್ ವಳವೂರು, ಎಸ್ಸೆಸ್ಸೆಫ್ ವಗ್ಗ ಶಾಖೆ ಅಧ್ಯಕ್ಷ ಮುಹಮ್ಮದ್ ಹಾರಿಸ್ ಸಹಿತ ಹಲವಾರು ಗಣ್ಯರು ಉಪಸ್ಥಿತರಿದ್ದರು. ಅಬ್ದುಲ್ ರಶೀದ್ ಸ್ವಾಗತಿಸಿ, ವಂದಿಸಿದರು
Next Story





