ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷರಾಗಿ ಸುಖದೇವ ಆಯ್ಕೆ
ಶಿಲ್ಪಾ ಮಹಿಳಾ ವಿಭಾಗದ ಸಂಚಾಲಕಿ
ಬೆಂಗಳೂರು, ಎ. 24: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿಯು ಇತ್ತೀಚೆಗೆ ನಡೆಸಿದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಳಕಂಡಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ರಾಜ್ಯ ಉಪಾಧ್ಯಕ್ಷರಾಗಿ ಎಚ್.ಸುಖದೇವ, ಮಂಜುನಾಥ್ ಎಸ್. ಅವರನ್ನು ಆಯ್ಕೆ ಮಾಡಲಾಗಿದೆ. ತಾಯ್‍ರಾಜ್ ಮರೀಚಿ ತಾಳ್- ಕಲಬುರಗಿ ವಿಭಾಗೀಯ ಸಮಿತಿ ಸಂಚಾಲಕ, ಶಿಲ್ಪಾ-ಮಹಿಳಾ ವಿಭಾಗದ ಸಂಚಾಲಕಿ, ಲೋಕೇಶಪ್ಪ ಎಂ.ಟಿ.-ಮೈಸೂರು ವಿಭಾಗೀಯ ಸಂಚಾಲಕ ಹಾಗೂ ಕೆ.ಎಸ್.ಪುಷ್ಪಲತಾ ಅವರನ್ನು ಮಹಿಳಾ ವಿಭಾಗದ ಸಹ ಸಂಚಾಲಕಿಯನ್ನಾಗಿ ನಿಯೋಜನೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಿ.ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





