ಕೋವ್ಯಾಕ್ಸಿನ್ ಲಸಿಕೆಗೆ ದರ ನಿಗದಿ: ಸರಕಾರಕ್ಕೆ 600 ರೂ.,ಖಾಸಗಿ ಆಸ್ಪತ್ರೆಗಳಿಗೆ 1,200 ರೂ.

ಹೊಸದಿಲ್ಲಿ: ಭಾರತ್ ಬಯೋಟೆಕ್ ಉತ್ಪಾದಿಸುತ್ತಿರುವ ಕೋವಾಕ್ಸಿನ್ ಲಸಿಕೆ ಖರೀದಿಗೆ ರಾಜ್ಯ ಸರಕಾರಗಳಿಗೆ 600 ರೂ. ಹಾಗೂ ಖಾಸಗಿ ಆಸ್ಪತ್ರೆಗಳಿಗೆ 1,200 ರೂ.ವೆಚ್ಚವಾಗಲಿದೆ ಎಂದು ಕಂಪನಿ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ರಫ್ತಿಗಾಗಿ ಕೋವಿಡ್-19 ಲಸಿಕೆ 15 ಡಾಲರ್ ನಿಂದ 20 ರವರೆಗೆ ವೆಚ್ಚವಾಗಲಿದೆ.
ದೇಶದ ಇನ್ನೊಂದು ಲಸಿಕೆ ತಯಾರಕ ಸಂಸ್ಥೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತನ್ನ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯಗಳಿಗೆ 400 ರೂ.ಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ 600 ರೂ.ಗೆ ಮಾರಾಟ ಮಾಡಲಿದೆ.
" ಇತರ ಲಸಿಕೆಗಳತ್ತ ಶೋಧನಾ ಪಯಣದಲ್ಲಿ ವೆಚ್ಚವನ್ನು ವಶಪಡಿಸಿಕೊಳ್ಳುವುದು ಅತ್ಯಗತ್ಯ ... ಜಗತ್ತಿಗೆ ಕೈಗೆಟುಕುವ, ಆದರೆ ವಿಶ್ವದರ್ಜೆಯ ಆರೋಗ್ಯ ಪರಿಹಾರಗಳನ್ನು ಒದಗಿಸುವುದು ಕಳೆದ 25 ವರ್ಷಗಳಿಂದ ನಮ್ಮ ಪ್ರಮುಖ ಉದ್ದೇಶವಾಗಿತ್ತು" ಎಂದು ಭಾರತ್ ಬಯೋಟೆಕ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಂ. ಎಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭಾರತದ ಹೊಸ ಸುತ್ತಿನ ವ್ಯಾಕ್ಸಿನೇಷನ್ ಅಭಿಯಾನ ಮೇ 1 ರಿಂದ ಪ್ರಾರಂಭವಾಗಲಿದ್ದು, ಈ ಬಾರಿ 18 ವರ್ಷಕ್ಕಿಂತ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಬಹುದು.