ಕೋವಿಡ್-19ಗೆ ಭಯ ಪಡುವ ಅಗತ್ಯವಿಲ್ಲ: ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ

ಹೊಸದಿಲ್ಲಿ: ಕೋವಿಡ್ -19 ಸಾಮಾನ್ಯ ರೋಗವಾಗಿದ್ದು, ಭಯಭೀತರಾಗುವ ಅಗತ್ಯವಿಲ್ಲ ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
ರವಿವಾರ ಕೊರೋನವೈರಸ್‌ಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಮೆದಾಂತ ಅಧ್ಯಕ್ಷ ಡಾ.ನರೇಶ್ ಟ್ರೆಹನ್, ಪ್ರಾಧ್ಯಾಪಕ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ನವೀತ್, ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಸುನಿಲ್ ಕುಮಾರ್ ಅವರೊಂದಿಗೆ ಮಾತನಾಡುತ್ತಾ ಗುಲೇರಿಯಾ ಹೇಳಿದರು.
"ನಾವು ಕೋವಿಡ್-19 ರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾತನಾಡಿದರೆ ಸಾರ್ವಜನಿಕವಾಗಿ ಭೀತಿ ಇದೆ. ಈ ಭೀತಿಯಿಂದಾಗಿ, ಜನರು ತಮ್ಮ ಮನೆಗಳಲ್ಲಿ ಚುಚ್ಚುಮದ್ದನ್ನು ಹಾಸಿಕೊಳ್ಳುತ್ತಿದ್ದಾರೆ, ರೆಮ್‌ಡೆಸಿವಿರ್ ಔಷಧ ಹಾಗೂ ಆಕ್ಸಿಜನ್ ಸಿಲಿಂಡರ್ ಸಂಗ್ರಹಣೆ ಇದರೊಂದಿಗೆ ಆರಂಭವಾಗಿದೆ. ಈ ಕಾರಣದಿಂದಾಗಿ ನಾವು ಪೂರೈಕೆಯ ಕೊರತೆಯನ್ನು ಎದುರಿಸುತ್ತಿದ್ದೇವೆ ಹಾಗೂ ಅನಗತ್ಯ ಭೀತಿಯನ್ನು ಸೃಷ್ಟಿಸಲಾಗುತ್ತಿದೆ "ಎಂದು ಗುಲೇರಿಯಾ ಹೇಳಿದರು.
"ಕೋವಿಡ್-19 ಸೋಂಕು ಸಾಮಾನ್ಯ ಸೋಂಕು. 85 ರಿಂದ 90 ಪ್ರತಿಶತದಷ್ಟು ಜನರು ಜ್ವರ, ಶೀತ, ಮೈಕೈ ನೋವು ಹಾಗೂ ಕೆಮ್ಮಿನಂತಹ ಸಾಮಾನ್ಯ ರೋಗಲಕ್ಷಣಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ, ಒಬ್ಬರಿಗೆ ರೆಮ್‌ಡೆಸಿವಿರ್ ಅಥವಾ ಹೆಚ್ಚಿನ ಔಷಧಿಗಳ ಅಗತ್ಯವಿಲ್ಲ. ಇಂತಹ ಸಾಮಾನ್ಯ ಸೋಂಕುಗಳಿಗೆ ನೀವು ಔಷಧಿಗಳನ್ನು ತೆಗೆದುಕೊಳ್ಳಬಹುದು ಅಥವಾ ಮನೆಮದ್ದು ಹಾಗೂ ಯೋಗದಿಂದ ಚಿಕಿತ್ಸೆ ನೀಡಬಹುದು. ನೀವು ಸಾಮಾನ್ಯ ಸ್ಥಿತಿಗೆ ಮರಳುತ್ತೀರಿ ಏಳು ಅಥವಾ 10 ದಿನಗಳಲ್ಲಿ ಗುಣಮುಖರಾಗುತ್ತೀರಿ. ನಿಮ್ಮ ಮನೆಯಲ್ಲಿ ರೆಮ್‌ಡೆಸಿವಿರ್ ಅಥವಾ ಆಮ್ಲಜನಕವನ್ನು ಹಾಕುವ ಅಗತ್ಯವಿಲ್ಲ'' ಎಂದು ಗುಲೇರಿಯಾ ಹೇಳಿದ್ದಾರೆ.







