ದ.ಕ.ಜಿಲ್ಲೆ : ಕೋವಿಡ್-19 ಮಾರ್ಗಸೂಚಿಯಂತೆ 372 ಮದುವೆ ಕಾರ್ಯಕ್ರಮ
ಮಂಗಳೂರು, ಎ.25: ದ.ಕ.ಜಿಲ್ಲೆಯಲ್ಲಿ ಕೋವಿಡ್-19 ಮಾರ್ಗಸೂಚಿಯಂತೆ 372 ಮದುವೆ ಕಾರ್ಯಕ್ರಮ ನಡೆಯಿತು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
ಮಂಗಳೂರು ತಾಲೂಕಿನಲ್ಲಿ 52, ಬಂಟ್ವಾಳದಲ್ಲಿ 62, ಬೆಳ್ತಂಗಡಿಯಲ್ಲಿ 43, ಪುತ್ತೂರಿನಲ್ಲಿ 24, ಸುಳ್ಯದಲ್ಲಿ 19, ಕಡಬದಲ್ಲಿ 9, ಮೂಡುಬಿದಿರೆಯಲ್ಲಿ 16 ಸಹಿತ ಗ್ರಾಮಾಂತರ ಜಿಲ್ಲೆಯಲ್ಲಿ 225, ನಗರ ವ್ಯಾಪ್ತಿಯಲ್ಲಿ 65, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 82 ಸಹಿತ ಒಟ್ಟು 372 ಮಂದಿ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ.
ಎಲ್ಲರೂ ಸರಕಾರದ ಕೋವಿಡ್-19 ಮಾರ್ಗಸೂಚಿಯಂತೆ ಸರಳ ರೀತಿಯಲ್ಲಿ ಮದುವೆಯಾಗಿದ್ದಾರೆ. ಮದುವೆಗೆ ಸ್ಥಳೀಯಾಡಳಿತ ಸಹಿತ ನಿರ್ದಿಷ್ಟ ಅಧಿಕಾರಿಗಳ ಅನುಮತಿ ಪತ್ರವನ್ನು ಪಡೆಯಲಾಗಿತ್ತು
Next Story





