Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ26 April 2021 12:10 AM IST
share
ಓ ಮೆಣಸೇ...

ಕೊರೋನ ಕಾರಣದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿದರೆ ಸರಕಾರಕ್ಕೆ ಕೆಟ್ಟ ಹೆಸರು ಬರಲಿದೆ- ರಘುಪತಿ ಭಟ್, ಶಾಸಕ
ಕೊರೊನ ಕಾರಣದಿಂದ ಬಂದ ಕೆಟ್ಟ ಹೆಸರನ್ನು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತೊಳೆಯುವ ಉದ್ದೇಶವೇ.


ಕೆಲವರು ಹಣದಾಸೆಗೆ ಜೋತಿಷ್ಯ ಶಾಸ್ತ್ರವನ್ನು ದುರ್ಬಳಕೆ ಮಾಡಿಕೊಳ್ಳ್ಳುತ್ತಿದ್ದಾರೆ -ವಿ.ಸೋಮಣ್ಣ, ಸಚಿವ
ನೇರವಾಗಿ ರಾಜಕೀಯ ಸೇರಿ. ಅದನ್ನು ದುರ್ಬಳಕೆ ಮಾಡಿದರೆ ಕೇಳುವವರೇ ಇಲ್ಲ.


ಆಮ್ಲಜನಕದ ಕೊರತೆ ಬಗ್ಗೆ ಮಾತನಾಡಲು ಪ್ರಧಾನಿ ಮೋದಿಗೆ ಫೋನ್ ಮಾಡಿದ್ದೆ ಅವರು ಪ.ಬಂ.ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ -ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಭಾಷಣಗಳ ಮೂಲಕ ಆಮ್ಲಜನಕ ಉತ್ಪತ್ತಿ ಮಾಡುತ್ತಿದ್ದಾರೆ.


ಕುಂಭ ಮೇಳದಲ್ಲಿ ಪಾಲ್ಗೊಂಡು ತಮ್ಮ ರಾಜ್ಯಗಳಿಗೆ ಮರಳಿದವರು ಕೊರೋನವನ್ನು ಪ್ರಸಾದದಂತೆ ಹಂಚಿದ್ದಾರೆ -ಕಿಶೋರಿ ಪೆಡ್ನೇಕರ್, ಮುಂಬೈ ಮೇಯರ್
ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಂಡು ಹಂಚಿರೋದೇನು?


ಚುನಾವಣೆಗಳಿಗೂ ಕೋವಿಡ್ ಸಂಖ್ಯೆ ಹೆಚ್ಚಳಕ್ಕೂ ನಂಟು ಕಲ್ಪಿಸುವುದು ಸರಿಯಲ್ಲ -ಅಮಿತ್ ಶಾ, ಕೇಂದ್ರ ಸಚಿವ
ಆಕ್ಸಿಜನ್‌ಗಳ ಕೊರತೆಗೂ ಚುನಾವಣೆಗಳಿಗೂ ಸಂಬಂಧ ಕಲ್ಪಿಸಬಹುದೇ?


ಮೋದಿ, ಯಡಿಯೂರಪ್ಪ, ಸಿದ್ದರಾಮಯ್ಯ ನಾಯಕರು ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ ರಾಹುಲ್, ಪ್ರಿಯಾಂಕಾ, ಸೋನಿಯಾ ಅವರನ್ನು ನಾಯಕರು ಎನ್ನಲಾಗದು -ಸಿ.ಟಿ.ರವಿ, ಮಾಜಿ ಸಚಿವ
ಕೊರೋನ ಮೋದಿಯನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ.


ಕೊರೋನ ತಡೆಯುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ್ದು, ಸರಕಾರಿ ಆಸ್ಪತ್ರೆಗಳು ನರಕ ಹಾಗೂ ಯಮಲೋಕವಾಗುತ್ತಿದೆ -ವಾಟಾಳ್ ನಾಗರಾಜ್, ಹೋರಾಟಗಾರ
ಯಮನ ವಾಹನ ಕೋಣನ ಮೇಲೆ ಕುಳಿತು ಪ್ರತಿಭಟನೆ ಮಾಡಬಾರದೇ?


ದೇಶವನ್ನು ಮುನ್ನಡೆಸುತ್ತಿರುವುದು ಸರಕಾರವಲ್ಲ, ಒಂದು ಸಾರ್ವಜನಿಕ ಸಂಸ್ಥೆ -ಸೀತಾರಾಮ್ ಯಚೂರಿ, ಸಿಪಿಎಂ ಪ್ರ.ಕಾರ್ಯದರ್ಶಿ
ಸಾರ್ವಜನಿಕ ಸಂಸ್ಥೆಗಳನ್ನೆಲ್ಲ ಖಾಸಗೀಕರಣ ಮಾಡಿದ್ದೇನಲ್ಲ, ಎಂದರಂತೆ ಮೋದಿ.


ಸಿಎಂ ಯಡಿಯೂರಪ್ಪರಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಹಾಗಾಗಿ ಅವರ ಪಕ್ಕದಲ್ಲಿರುವವರು ಅವರಿಗೆ ಸರಿಯಾಗಿ ಮಾಹಿತಿ ನೀಡದೆ ತಪ್ಪು ದಾರಿ ಹೇಳುತ್ತಿದ್ದಾರೆ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಮೋದಿಯವರಿಗೆ ಸರಿಯಾಗಿ ಕಣ್ಣು ಕಾಣಿಸುತ್ತಿಲ್ಲವಂತೆ, ಅಲ್ಲಿಗೆ ಸರಿಯಾಯಿತು.


ಕೊರೋನ ಹರಡುವುದನ್ನು ನಿಯಂತ್ರಿಸಲು ಜನರು ಆದಷ್ಟು ಮದುವೆ, ಬೀಗರ ಕೂಟ, ಬಾಡೂಟಗಳಿಂದ ದೂರ ಇರಬೇಕು -ಆರ್.ಅಶೋಕ್, ಸಚಿವ
ಕೂಟ, ಬಾಡೂಟಗಳನ್ನೆಲ್ಲ ಚುನಾವಣಾ ರ್ಯಾಲಿಗಳಿಗಷ್ಟೇ ಸೀಮಿತವೇ?


ಕೊರೋನ ಎನ್ನುವುದು ಒಂಥರ ಕರೆಂಟು ಹೊಡೆದಷ್ಟು ಭಯ ಹುಟ್ಟಿಸಿದೆ -ಎಚ್.ಡಿ.ರೇವಣ್ಣ, ಮಾಜಿ ಸಚಿವ
ಆದರೆ ಕರೆಂಟ್ ಬಿಲ್ಲಿಗಿಂತ ಕೊರೋನ ಬಿಲ್ಲು ದುಬಾರಿಯಾಗಿದೆ.


ದೇಶದಿಂದ ಕೊರೋನವನ್ನು ಹೋಗಲಾಡಿಸಲು ಎಲ್ಲರೂ ರಾಜಕೀಯ ಮೀರಿ ಕೆಲಸ ಮಾಡಬೇಕು -ಬಸವರಾಜ್ ಬೊಮ್ಮಾಯಿ, ಸಚಿವ
ಅವರು ಕೊರೋನ ಉಳಿಸಲು ರಾಜಕೀಯ ರ್ಯಾಲಿ ಹಮ್ಮಿಕೊಂಡಿದ್ದಾರೆ.


ಜಗತ್ತಿನ ಯಾವ ಮೂಲೆಗೆ ಹೋದರೂ ಅಲ್ಲಿ ನಮ್ಮ ಸಂಸ್ಕೃತಿ ಇರುತ್ತದೆ -ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ಮುಖಂಡ
ಹೊಡಿ, ಬಡಿ, ಕೊಲ್ಲು ಸಂಸ್ಕೃತಿಯ ಬಗ್ಗೆ ಹೇಳುತ್ತಿರಬೇಕು.


ಪ.ಬಂ.ದಲ್ಲಿ ಸೋಲುವ ಭಯದಿಂದಲೇ ರಾಹುಲ್ ಗಾಂಧಿ ಪ್ರಚಾರ ಸಭೆಗಳನ್ನು ರದ್ದು ಪಡಿಸಿದ್ದಾರೆ -ರವಿಶಂಕರ್ ಪ್ರಸಾದ್, ಗೃಹ ಸಚಿವ
ಕೊರೋನ ಭಾರತವನ್ನು ಸೋಲಿಸುವ ಬದಲು ಚುನಾವಣೆಯಲ್ಲಿ ಸೋಲುವುದು ವಾಸಿ ಎಂದು ಭಾವಿಸಿರಬೇಕು.


ಕೋವಿಡ್ ಸೋಂಕು ಹೆಚ್ಚಾಗಲು ಜನರ ಉದಾಸೀನ ಕಾರಣ -ಡಾ.ಸುಧಾಕರ್, ಸಚಿವ
ಸರಕಾರದ ಉದಾಸೀನದ ಬಗ್ಗೆ ಮೊದಲು ಮಾತನಾಡಿ.

ಕೊರೋನ ಸೋಂಕು ತಡೆಗೆ ಲಾಕ್‌ಡೌನ್ ಕೊನೆಯ ಅಸ್ತ್ರ -ನರೇಂದ್ರ ಮೋದಿ, ಪ್ರಧಾನಿ
ಸೋಂಕು ತಡೆಗೆ ಲಾಕ್‌ಡೌನ್ ಬಿಟ್ಟು ಬೇರೆ ಯಾವ ಅಸ್ತ್ರ ನಿಮ್ಮ ಬಳಿ ಇದೆ ಎನ್ನುವುದನ್ನು ಮೊದಲು ಹೇಳಿ.


ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿ ಪ್ರತಿಪಕ್ಷ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವುದನ್ನು ಬಿಡಬೇಕು -ಬಸವರಾಜ್ ಬೊಮ್ಮಾಯಿ, ಸಚಿವ
ಮಂಕಿ ಬಾತ್ ಈಗ ಬಿಸಿ ಬೇಳೆ ಬಾತ್ ಆಗಿ ಗಂಟಲಲ್ಲಿ ಇಳಿಯುತ್ತಿಲ್ಲ.


ಸಿದ್ದರಾಮಯ್ಯ ನಂತಹವರು ಕೂಡಾ ಮುಖ್ಯ ಮಂತ್ರಿಯಾಗಿದ್ದರಲ್ಲ ಎಂಬ ನೋವು ನನ್ನನ್ನು ಕಾಡುತ್ತದೆ -ಕೆ.ಎಸ್.ಈಶ್ವರಪ್ಪ, ಸಚಿವ
ಹೌದು, ಈಗ ಆಗಿಲ್ಲವಲ್ಲ ಎನ್ನುವ ಜನರ ನೋವು ಅದು.


ಆರ್ಥಿಕ ಬೆಳವಣಿಗೆ ಕಾಯ್ದಿರಿಕೊಳ್ಳಬೇಕೆಂದರೆ ಉದ್ಯಮ ಹಾಗೂ ಸರಕಾರದ ನಡುವೆ ಸಂಪೂರ್ಣ ವಿಶ್ವಾಸ ಇರಬೇಕು -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ ದೇಶದಲ್ಲೀಗ ಉದ್ಯಮಗಳೂ ಇಲ್ಲ, ಸರಕಾರವೂ ಇಲ್ಲ. ಅದಾನಿ ಮತ್ತು ಅಂಬಾನಿಯಷ್ಟೇ ಉಳಿದುಕೊಂಡಿದ್ದಾರೆ.


ರಾಮಾಯಣಕ್ಕೆ ವಾಲ್ಮೀಕಿ ರಾಮಾಯಣವೇ ಆಧಾರ ಗ್ರಂಥ -ರಾಘವೇಶ್ವರ ಸ್ವಾಮೀಜಿ, ರಾಮ ಚಂದ್ರಾಪುರ ಮಠ
ನಿಮ್ಮ ಅಶ್ಲೀಲ ಸಂಬಂಧಕ್ಕೆ ರಾವಣನೇ ಆಧಾರ ಎಂದು ಯಾರೋ ಆರೋಪಿಸುತ್ತಿದ್ದಾರೆ.


ಉಪ ಚುನಾವಣೆಯೇ ಬೇರೆ, ಕೊರೋನ 2ನೇ ಅಲೆಯ ವಿಚಾರವೇ ಬೇರೆ -ಬಿ.ಎ.ಬಸವರಾಜ ಭೈರತಿ, ಸಚಿವ
ಮೋದಿಯ ಅಲೆ, ಕೊರೋನ ಅಲೆಯಾಗಿ ಮಾರ್ಪಟ್ಟಿದೆ.


ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಹುಟ್ಟುವ 3ನೇ ಮಗುವಿಗೆ ದಂಡ ಹಾಕಿ ಇಲ್ಲವೇ ಜೈಲಿಗೆ ಕಳುಹಿಸಿ -ಕಂಗನಾ ರಣಾವತ್, ನಟಿ
ತಮ್ಮ ಪಾಲಕರ ಕುರಿತಂತೆ ಈ ಪರಿಯ ಸಿಟ್ಟೆ?


ವ್ಯವಸ್ಥೆಯಲ್ಲಿ ಬೇರೂರಿರುವ ಜನಾಂಗೀಯ ತಾರತಮ್ಯವು ನಮ್ಮ ದೇಶದ ಆತ್ಮಕ್ಕೆ ಅಂಟಿರುವ ಕಳಂಕ-ಜೋ ಭೈೆಡನ್, ಅಮೆರಿಕ ಅಧ್ಯಕ್ಷ
ಭಾರತದಲ್ಲ್ಲಿ ಅದನ್ನು ಸಂಸ್ಕೃತಿ ಎಂದು ಕರೆಯುತ್ತಾರೆ.


ಕೋವಿಡ್-19 ಕೊನೆಗೊಂಡ ನಂತರ ನಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದು ಮುಖ್ಯವಾಗಲಿದೆ -ನರೇಂದ್ರ ಮೋದಿ, ಪ್ರಧಾನಿ
ಹೌದು ನಿಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದು ನಿಮಗೆ ಕಷ್ಟವಾಗಲಿದೆ.


ಕೊರೋನದಿಂದ ಇಷ್ಟೊಂದು ಸಾವುಗಳು ಸಂಭವಿಸುತ್ತಿದ್ದರೂ ಜನರು ಇನ್ನೂ ಅಸಡ್ಡೆ ಮಾಡುತ್ತಿದ್ದಾರೆ -ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಜನರಲ್ಲ, ಸರಕಾರ ಅಸಡ್ಡೆ ಮಾಡುತ್ತಿರುವುದು.


ಕಸಾಪ ಚುನಾವಣೆಯಲ್ಲಿ ಸರಕಾರ ಮೂಗು ತೂರಿಸುವುದಿಲ್ಲ -ಅರವಿಂದ ಲಿಂಬಾವಳಿ, ಸಚಿವ
ಬೇರೇನು ತೂರಿಸುತ್ತೀರಿ, ಅದನ್ನು ಹೇಳಿ.


ಜನರ ಜೀವ ರಕ್ಷಿಸಲು ವೀಕೆಂಡ್ ಕರ್ಫ್ಯೂ ಮಾಡಲಾಗಿದೆ -ಡಾ.ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ

ಜೀವ ರಕ್ಷಿಸಲು ಬೇಕಾಗಿರುವುದು ಆಕ್ಸಿಜನ್ ಅಲ್ಲವೇ?

share
ಪಿ.ಎ.ರೈ
ಪಿ.ಎ.ರೈ
Next Story
X