ಕೊರೋನ ಸೋಂಕಿಗೆ ಟಿಎಂಸಿ ಅಭ್ಯರ್ಥಿ ಬಲಿ

ಹೊಸದಿಲ್ಲಿ, ಎ. 25: ಕೊರೋನ ಸೋಂಕಿನಿಂದ ತೃಣಮೂಲ ಕಾಂಗ್ರೆಸ್ ನಾಯಕ ಕಾಜಲ್ ಸಿನ್ಹಾ ಮೃತಪಟ್ಟಿದ್ದಾರೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರವಿವಾರ ಹೇಳಿದ್ದಾರೆ.
ಟ್ವೀಟ್ ನಲ್ಲಿ ಆಘಾತ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ‘‘ತುಂಬಾ ದುಃಖಕರ ಹಾಗೂ ಆಘಾತಕಾರಿ ವಿಷಯ. ಖರರ್ದಾಹದ ನಮ್ಮ ಅಭ್ಯರ್ಥಿ ಕಾಜಲ್ ಸಿನ್ಹಾ ಅವರು ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಜನರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರು ತೃಣಮೂಲ ಕಾಂಗ್ರೆಸ್ ನ ದೀರ್ಘಕಾಲದ ಬದ್ಧ ಸದಸ್ಯ. ನಾವು ಅವರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಸಂತಾಪ ವ್ಯಕ್ತಪಡಿಸುತ್ತೇನೆ’’ ಎಂದಿದ್ದಾರೆ.
Next Story