ಆಮ್ಲಜನಕ ಕೊರತೆ: ಹರ್ಯಾಣದಲ್ಲಿ ಐವರು ಕೋವಿಡ್ ರೋಗಿಗಳು ಮೃತ್ಯು

ಚಂಡಿಗಡ: ಹಿಸಾರ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಐವರು ಕೊರೋನ ವೈರಸ್ ರೋಗಿಗಳು ಮೃತಪಟ್ಟ ಬಳಿಕ ಪ್ರತಿಭಟನೆ ಭುಗಿಲೆದ್ದಿದೆ. ವೈದ್ಯಕೀಯ ಆಕ್ಸಿಜನ್ ಕೊರತೆಯಿಂದಾಗಿ ಸಾವು ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಮೂರನೇ ಇಂತಹ ಘಟನೆ ನಡೆದಿದೆ.
ಗುರುಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ರವಿವಾರ ನಾಲ್ವರು ರೋಗಿಗಳು ಸಾವನ್ನಪ್ಪಿದ್ದರು.
ರಾಜ್ಯ ರಾಜಧಾನಿ ಚಂಡಿಗಡದಿಂದ 350 ಕಿ.ಮೀ.ದೂರದಲ್ಲಿರುವ ರೆವಾರಿಯ ಆಸ್ಪತ್ರೆಯಲ್ಲಿ ನಾಲ್ವರು ಕೋವಿಡ್ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದರು.
ಎರಡೂ ಘಟನೆಯ ಕುರಿತು ಜಿಲ್ಲಾ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.
ಕೋವಿಡ್ ಪ್ರಕರಣಗಳಲ್ಲಿ ಭಾರತವು ಆತಂಕಕಾರಿ ಏರಿಕೆ ಕಂಡುಬಂದ ನಂತರ ದಿಲ್ಲಿಯ ಹಲವಾರು ಪ್ರಮುಖ ಆಸ್ಪತ್ರೆಗಳು ಎಸ್ ಒಎ ಸ್ ಸಂದೇಶಗಳನ್ನು ಕಳುಹಿಸಿವೆ.
ಆಮ್ಲಜನಕದ ಒತ್ತಡ ಕಡಿಮೆಯಾಗಿ ಶುಕ್ರವಾರ ದಿಲ್ಲಿಯ ಆಸ್ಪತ್ರೆಯಲ್ಲಿ 25 ರೋಗಿಗಳು ಮೃತಪಟ್ಟಿದ್ದರು.
ದೇಶದ ಇತರ ಭಾಗಗಳಂತೆ ಹರ್ಯಾಣವೂ ಕೂಡ ಕೋವಿಡ್ ಪ್ರಕರಣಗಳ ಉಲ್ಬಣಕ್ಕೆ ಸಾಕ್ಷಿಯಾಗಿದೆ. ಕಳೆದ 24 ಗಂಟೆಗಳಲ್ಲಿ 10,000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಆಮ್ಲಜನಕದ ಕೊರತೆಯಿಂದಾಗಿ ಐವರು ಸಾವನ್ನಪ್ಪಿದ್ದಾರೆ ಎಂದು ನಮಗೆ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಕೋವಿಡ್ ಶಿಷ್ಟಾಚಾರದ ಪ್ರಕಾರ ಆರೋಗ್ಯ ಇಲಾಖೆ ಮೃತದೇಹಗಳನ್ನು ತೆಗೆದುಕೊಂಡು ಹೋಗಿದೆ ಎಂದು ಪೊಲೀಸ್ ಅಧಿಕಾರಿ ರಾಜ್ಬೀರ್ ಸಿಂಗ್ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.







