ಕರ್ನಾಟಕದಲ್ಲಿ ಕೋವಿಡ್ ಕರ್ಫ್ಯೂ: ಅಂತರ್ ರಾಜ್ಯ ಪ್ರಯಾಣಕ್ಕೆ ನಿರ್ಬಂಧ, ತುರ್ತು ಪ್ರಕರಣಗಳಿಗೆ ವಿನಾಯಿತಿ

ಸಾಂದರ್ಭಿಕ ಚಿತ್ರ
ಬೆಂಗಳೂರು:ಮಾರಣಾಂತಿಕ ಕೊರೋನ ವೈರಸ್ ಹರಡುವುದನ್ನು ತಡೆಯಲು ಕರ್ನಾಟಕ ರಾಜ್ಯಾದ್ಯಂತ ಎಪ್ರಿಲ್ 27ರ ರಾತ್ರಿಯಿಂದ 14 ದಿನ ಕೋವಿಡ್ ಕರ್ಫ್ಯೂ ಆರಂಭವಾಗಲಿದೆ. ರಾಜ್ಯ ವ್ಯಾಪಿ ಸಾರ್ವಜನಿಕ ಸಾರಿಗೆ ಸಹಿತ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ತಬ್ದವಾಗಲಿದೆ. ಕಟ್ಟಡ ನಿರ್ಮಾಣ ಹಾಗೂ ಕೃಷಿ ವಲಯಗಳಿಗೆ ವಿನಾಯಿತಿ ನೀಡಲಾಗಿದೆ.
ಕೆಎಸ್ಸಾರ್ಟಿಸಿ, ಮೆಟ್ರೋ ಸೇವೆಗಳು ಹಾಗೂ ಇತರ ಸಾರ್ವಜನಿಕ ಸಾರಿಗೆಗಳು ಸ್ತಬ್ದವಾಗಲಿದೆ.
ಅಂತರ್-ರಾಜ್ಯ ಪ್ರಯಾಣವನ್ನು ರಾಜ್ಯ ಸರಕಾರ ನಿರ್ಬಂಧಿಸಿದ್ದು, ಇತರ ರಾಜ್ಯಗಳ ಜನರು ರಾಜ್ಯಕ್ಕೆ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿದೆ. ಆದಾಗ್ಯೂ ಅಂತರ್ ರಾಜ್ಯ ಪ್ರಯಾಣದಲ್ಲಿ ತುರ್ತು ಪ್ರಕರಣಗಳಿಗೆ ವಿನಾಯಿತಿ ಇದೆ ಎಂದು ಸರಕಾರವು ತಿಳಿಸಿದೆ.
Next Story