ಅಕ್ರಮ ಮದ್ಯ ಮಾರಾಟ: ಓರ್ವನ ಸೆರೆ
ಕುಂದಾಪುರ, ಎ.26: ಕಂದಾವರ ಗ್ರಾಮದ ಗ್ಲೋರಿಯ ಬಾರ್ ಬಳಿ ಎ.25ರಂದು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕೊಳಲಗಿರಿಯ ಸುಧೀರ(35) ಬಂಧಿತ ಆರೋಪಿ. ಈತನಿಂದ 6500ರೂ. ವೌಲ್ಯದ ಮದ್ಯ ಹಾಗೂ 320 ರೂ. ನಗದು ವಶಪಡಿಸಿಕೊಳ್ಳ ಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





