ಮಂಜನಾಡಿ: ಜಮಾಅತೆ ಇಸ್ಲಾಮಿ ವತಿಯಿಂದ ಮನೆ ಹಸ್ತಾಂತರ

ಮಂಗಳೂರು, ಎ.26: ಮಂಜನಾಡಿ ಸಮೀಪದ ನೆತ್ತಿಲಪದವು ಎಂಬಲ್ಲಿ ಗೋಡೆ ಮತ್ತು ಮೇಲ್ಛಾವಣಿಯಾಗಿ ಮುಂದುವರಿಸಲಾಗದೆ ಬಾಕಿಯಾಗಿ ಉಳಿದಿದ್ದ ಬಡ ಕುಟುಂಬದ ಮನೆಯ ಕೆಲಸವನ್ನು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಇದರ ವತಿಯಿಂದ ಪೂರ್ತಿಗೊಳಿಸಿ ಸರಳ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು.
ಇಸ್ಮಿಕಾ ಮಂಗಳೂರು ಇದರ ವ್ಯವಸ್ಥಾಪಕ ಮುನವ್ವರ್ ಅಹ್ಮದ್ ಮನೆಯನ್ನು ಉದ್ಘಾಟಿಸಿದರು. ಉಳ್ಳಾಲ ಸಮಾಜ ಸೇವಾ ಘಟಕದ ಸಂಚಾಲಕ ಅಹ್ಮದ್ ಶರೀಫ್, ಇಸಾಕ್ ಕಲ್ಲಾಪು, ಹುಸೈನ್ ಅಹ್ಮದ್, ಹಂಝಾಕ, ಶಂಶೀರ್ ಪಿಲಾರ್ ಉಪಸ್ಥಿತರಿದ್ದರು.
Next Story





