ಪಶ್ಚಿಮ ಬಂಗಾಳದಲ್ಲಿ ದೇಶದಲ್ಲೇ ಕೊರೋನ ಸೋಂಕಿನ ಪ್ರಕರಣಗಳ ಅತ್ಯಧಿಕ ಬೆಳವಣಿಗೆ ದರ

ಹೊಸದಿಲ್ಲಿ, ಎ. 26: ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ದೇಶದಲ್ಲೇ ಅತ್ಯಧಿಕ ಶೇ. 9.5 ಕೊರೋನ ಸೋಂಕಿನ ಪ್ರಕರಣಗಳ ಬೆಳವಣಿಗೆ ದರ ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶ ತಿಳಿಸಿದೆ. ಪಶ್ಚಿಮಬಂಗಾಳದ ಬಳಿಕ ಕರ್ನಾಟಕದಲ್ಲಿ ಅತ್ಯಧಿಕ ಶೇ. 9, ದಿಲ್ಲಿಯಲ್ಲಿ ಶೇ. 1.5 ಹಾಗೂ ಮಹಾರಾಷ್ಟ್ರದಲ್ಲಿ ಶೇ. 0.5 ಕೊರೋನ ಸೋಂಕಿನ ಪ್ರಕರಣಗಳ ಬೆಳವಣಿಗೆ ದಾಖಲಾಗಿದೆ.
ಪಶ್ಚಿಮಬಂಗಾಳದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನ ಸೋಂಕಿನ 14,284 ಹೊಸ ಪ್ರಕರಣಗಳು ವರದಿಯಾಗಿವೆ. 59 ಮಂದಿ ಸಾವನ್ನಪ್ಪಿದ್ದಾರೆ. 7,584 ಮಂದಿ ಗುಣಮುಖರಾಗಿದ್ದಾರೆ.
Next Story