ಎಸ್‌ಎಸ್‌ಬಿ ಮಾಜಿ ವರಿಷ್ಠ ಅರುಣ್ ಚೌಧರಿ ಕೊರೋನ ಸೋಂಕಿಗೆ ಬಲಿ
ಹೊಸದಿಲ್ಲಿ, ಎ. 26: ಶಸಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ)ದ ಮಾಜಿ ವರಿಷ್ಠ ಅರುಣ್ ಜೌಧರಿ (66) ಅವರು ಕೊರೋನ ಸೋಂಕಿನಿಂದ ರವಿವಾರ ಮೃತಪಟ್ಟಿದ್ದಾರೆ. ಬಿಹಾರ್ ಕೇಡರ್‌ನ 1977ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಚೌಧರಿ ಅವರು ಸುಮಾರು 2 ದಶಕಗಳ ಕಾಲ ಇಂಟಲಿಜೆನ್ಸ್ ಬ್ಯೂರೊ (ಐಬಿ)ದ ಜಮ್ಮು ಹಾಗೂ ಕಾಶ್ಮೀರ ಡೆಸ್ಕ್‌ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.
ಆರಂಭಿಕ ಸೇವಾ ದಿನಗಳಲ್ಲಿ ಅವರು ತಮ್ಮ ಕೇಡರ್‌ನ ರಾಜ್ಯದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಅಲ್ಲದೆ, ಕೇಂದ್ರ ಕೈಗಾರಿಕೆ ರಕ್ಷಣಾ ಪಡೆಯೊಂದಿಗೆ ಸಹಭಾಗಿತ್ವ ಹೊಂದಿದ್ದರು. ಅಲ್ಲಿ ಅವರು ಅದರ ವಿಮಾನ ಭದ್ರತಾ ಘಟಕದ ಮುಖ್ಯಸ್ಥರಾಗಿದ್ದರು. 2012 ಡಿಸೆಂಬರ್‌ನಲ್ಲಿ ಅವರು ಎಸ್‌ಎಸ್‌ಬಿಯ ಪ್ರಧಾನ ನಿರ್ದೇಶಕರಾಗಿ ನಿಯೋಜಿತರಾಗಿದ್ದರು ಹಾಗೂ 2014 ಎಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗಿದ್ದರು. ಅವರ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ವ್ಯಕ್ತಪಡಿಸಿರುವ ಎಸ್‌ಎಸ್‌ಬಿ, ಚೌಧರಿ ಅವರ ಅಕಾಲಿಕ ಮರಣ ದುಃಖ ತಂದಿದೆ ಎಂದಿದೆ.
Next Story