ಹೆಚ್ಚುತ್ತಿರುವ ಕೋವಿಡ್ ಸೋಂಕು: ವಿಜಯೋತ್ಸವ ನಿಷೇಧಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ: ಕೋವಿಡ್ ಸೋಂಕಿನಲ್ಲಿ ಭಾರೀ ಹೆಚ್ಚಳ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಹಲವು ರಾಜ್ಯಗಳನ್ನು ಲಾಕ್ ಡೌನ್ ಮಾಡಲಾಗಿದೆ ಮತ್ತು ಬಿಗಿ ನಿಯಮಗಳನ್ನು ಹೇರಲಾಗಿದೆ. ಇದೀಗ ಐದು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶ ಪ್ರಕಟವಾದ ವೇಳೆ ವಿಜಯೋತ್ಸವ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ ಎಂದು ತಿಳಿದು ಬಂದಿದೆ.
ಮೇ2 ರಂದು ಮತ ಎಣಿಕೆ ನಡೆದ ಬಳಿಕ ಯಾವುದೇ ವಿಜಯೋತ್ಸವ ರ್ಯಾಲಿ, ಸಮಾವೇಶ ಹಾಗೂ ಜನ ಸೇರದೇ ಇರುವಂತೆ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ ಎಂದು ndtv.com ವರದಿ ಮಾಡಿದೆ.
Next Story





