Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ''ಅಯ್ಯೋ ಎಂಥಾ ಮೂರ್ಖರು, ಮನೆಗೆ ಬೆಂಕಿ...

''ಅಯ್ಯೋ ಎಂಥಾ ಮೂರ್ಖರು, ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಯೋಜನೆ"

ಆಕ್ಸಿಜನ್ ಘಟಕ ಸ್ಥಾಪನೆ ಬಗ್ಗೆ ಪೋಸ್ಟ್ ಹಾಕಿದ ಸಂಸದ ಪ್ರತಾಪ್ ಸಿಂಹಗೆ ನೆಟ್ಟಿಗರ ತರಾಟೆ

ವಾರ್ತಾಭಾರತಿವಾರ್ತಾಭಾರತಿ27 April 2021 3:49 PM IST
share
ಅಯ್ಯೋ ಎಂಥಾ ಮೂರ್ಖರು, ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಯೋಜನೆ

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗಲಿರುವ ಬಗ್ಗೆ ಸೋಮವಾರ ಪೇಸ್ಬುಕ್ ನಲ್ಲಿ ಪೋಸ್ಟ್ ಹಾಕಿದ್ದು, ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಈ ಘಟಕಗಳು ನಿರ್ಮಾಣವಾಗಲಿದೆ ಎಂದು ತಿಳಿಸಿದ್ದಾರೆ. ಆದರೆ ಕೊರೋನ ಮಿತಿಮೀರಿ ಹರಡುತ್ತಿರುವ ಸನ್ನಿವೇಶ ನಿರ್ಮಾಣ ಆದ ಬಳಿಕ ಸರಕಾರ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪಿಸುತ್ತಿರುವ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ.

ಪೇಸ್ಬುಕ್ ಪೋಸ್ಟ್ ನಲ್ಲಿ ಪ್ರತಾಪ್ ಸಿಂಹ ಅವರು, "ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ದೇಶದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ. ಮೆಡಿಕಲ್ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮೋದ ಸರಕಾರದಿಂದ ಮಹತ್ವದ ಕ್ರಮ" ಎಂದು  ತಿಳಿಸಿದ್ದಾರೆ.

ಪ್ರತಾಪ್ ಸಿಂಹ ಅವರ ಈ ಪೋಸ್ಟ್ ಗೆ ಸುಮಾರು 1900 ಲೈಕ್ಸ್ ಗಳು, 700 ರಷ್ಟು ಕಮೆಂಟ್ ಗಳು ಬಂದಿವೆ. ಪೋಸ್ಟನ್ನು 375 ಮಂದಿ ಶೇರ್ ಮಾಡಿದ್ದಾರೆ. ಆದರೆ ಬಹುತೇಕ ಮಂದಿ ಆಮ್ಲಜನಕ ಘಟಕ ಸ್ಥಾಪನೆ ಯೋಜನೆ ತಡವಾದ ಬಗ್ಗೆ ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದು, ಕೆಲವು ಕಮೆಂಟ್‌ಗಳು ಸಂಸದರು ಮತ್ತು ಪ್ರಸ್ತುತ ಯೋಜನೆಯ ಪರವಾಗಿ ಬಂದಿವೆ.

"ಸೂಪರ್, ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಯೋಜನೆ. ಬುಲೆಟ್ ಟ್ರೈನ್ ಆಯಿತು, ಸ್ಮಾರ್ಟ್ ಸಿಟಿ ಆಯಿತು. ಈಗ ಆಕ್ಸಿಜನ್ ಕಂಪನಿ, ಸಾಕು ನೀವು ಹೇಳುವ ಸುಳ್ಳು ಕೇಳಿ ಕೇಳಿ ಸಾಕಾಗೋಗಿದೆ ಎಂದು ವೆಂಕಟೇಶ್. ಕೆ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯ್ಯೋ ಎಂತ ಮೂರ್ಖರು ನೀವು. ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿರಲ್ಲೋ. ಒಂದು ವರ್ಷದಿಂದ ಯಾವ ಯಾವ ದನಗಳ ಮೇಯಿಸಿದಿರಿ. ಸ್ವಲ್ಪ ಮಾಹಿತಿ ಹಾಕಿ. ಮುಂದಿನ ಚುನಾವಣೆಯಲ್ಲಿ ಯಾವ ಸುಳ್ಳು ಹೇಳುತ್ತೀರೊ ಜನರಿಗೆ ಅರ್ಥವಾಗಲಿ ಎಂದು ರಘು ಎಂ.ಎನ್ ಎಂಬವರು ಕಮೆಂಟ್ ಮಾಡಿದ್ದಾರೆ. ಕೋರೋನ ಕಾರಣದಿಂದ ಹೋದ ವರ್ಷ ಶುರುವಾದ ಯೋಜನೆಯಲ್ಲಿ ಪ್ಲಾಂಟ್ ಗಳ ನಿರ್ಮಾಣ ಈಗ ಶುರುವಾಗುತ್ತಿದೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂದು ರಾಜಶೇಖರ ಮೈಲಸಂದ್ರ ಎಂಬವರು ಟೀಕಿಸಿದ್ದಾರೆ. 

ನಾವೇನು ಭಿಕ್ಷುಕರು ಅಲ್ಲ. ನಮ್ಮ ಪಾಲಿನ ತೆರಿಗೆ ಹಣವನ್ನ ಕೇಳೋಕೆ ಆಗದಿರುವ ನಿಮ್ಮಂತಹ ನಾಲಯಕ್ ಸಂಸದರನ್ನು ಗೆಲ್ಲಿಸಿದ್ದ ನಮ್ಮ ಕರ್ನಾಟಕದ ಜನರ ಶಾಪ ನಿಮಗೆ ತಟ್ಟದೇ ಇರುವುದಿಲ್ಲ. ಇನ್ನು ಎಷ್ಟು ದಿನ ಕೇಂದ್ರದ ನಾಯಕರಿಗೆ ಬಕೆಟ್ ಹಿಡಿದಿದ್ದೀರಿ. ಧೈರ್ಯವಾಗಿ ನಮ್ಮ ರಾಜ್ಯದ ಪಾಲನ್ನು ಕೇಳಿ ರಾಜ್ಯದವನ್ನ ಸಂಕಷ್ಟದಿಂದ ಪಾರು ಮಾಡಿ ಎಂದು ಶಿವಪ್ರಸಾದ್ ಎಂಬವರು ಮನವಿ ಮಾಡಿದ್ದಾರೆ.

ಮೂರನೇ ಅಥವಾ ನಾಲ್ಕನೇ ಅಲೆಗೆ ಬಹಳ ಬೇಗ ತಯಾರಿ ನಡೆಸಿದ್ದೀರಿ, ಅಭಿನಂದನೆಗಳು ಎಂದು ಮಧುಕರ್ ಗುಂಡಪ್ಪ ಎಂಬವರು ವ್ಯಂಗ್ಯವಾಡಿದ್ದು,  'ಎಲ್ಲರೂ ಸತ್ತಮೇಲೆ ಮಾಡಿ. ಇಷ್ಟು ಬೇಗ ಮಾಡಿದ್ರೆ ಜನ ಬದುಕಿ ಬಿಡುತ್ತಾರೆ ಸಾರ್' ಎಂದು ಸುರೇಶ್ ಗೌಡ ಸೂರಿ ಎಂಬವರು ಲೇವಡಿ ಮಾಡಿದ್ದಾರೆ.

ನಮ್ಮ ಜನರಿಗೆ ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತ ವಾಗಿ ನೀಡಿ. ನಿಮ್ಮಿಂದ ಬೇರೆ ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ಇನ್ನು ಮುಂದೆಯಾದರು ಅವಶ್ಯಕತೆ ಇಲ್ಲದಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡುವ ಬದಲು ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಸರ್ಕಾರಿ ಆಸ್ಪತ್ರೆ ಹಾಗೂ ಈಗ ಇರುವ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಿ. ಇನ್ನು ಮುಂದೆಯಾದರು ಇಂತಹ ತಪ್ಪುಗಳು ಆಗದಂತೆ ಗಮನಹರಿಸಿ ಎಂದು ಶಿವರಾಜ್ ಎಂಬವರು ತಿಳಿಸಿದ್ದಾರೆ. 

ಎಲ್ಲ ಸತ್ತೋದ ಮೇಲೆ ಸ್ಥಾಪನೆ ಮಾಡಿ. ಜನ ಚಿಕಿತ್ಸೆಗೆ ಭಿಕ್ಷುಕರ ತರ ಬೇಡಿಕೊಳುತ್ತಿದ್ದಾರೆ. ಮುಂದೆ ವೋಟು ಅಂತ ಬನ್ನಿ. ಜನ ಬೂಟಿನಲ್ಲಿ ಹೊಡೆದು ಕಳಿಸುತ್ತಾರೆ. ಮೊದಲ ಅಲೆಯಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿದ್ದೀರಿ. ಇನ್ನು ನುಂಗಿ ನೀರು ಕುಡಿದು ಬಿಡಿ. ನಾಡಿನ ಜನ ಉಗಿದು ಉಪ್ಪು ಹಾಕ್ತಾ ಇದ್ದಾರೆ. ಪಕ್ಕದ ರಾಜ್ಯದಲ್ಲಿ ಉಚಿತವಾಗಿ ಚಿಕಿತ್ಸೆಗೆ ಆದೇಶ ನೀಡಿದ್ದಾರೆ. ನಮ್ಮ ದುರದೃಷ್ಟ. ಚಿತಾಗಾರ ಸ್ಥಾಪನೆಗೆ ಜಾಗ ಹುಡುಕುತ್ತಾ ಇದ್ದಾರೆ ಎಂದು 
ತೇಜ ಗೌಡ ವಕೀಲರು ಎಂಬವರು ಟೀಕಿಸಿದ್ದಾರೆ. 

ನಿಜಕ್ಕೂ ನಾಚಿಕೆ ಆಗಲ್ವಾ ಹೇಳಿ. ಸಾಮಾನ್ಯ ಜನರ ಪರಿಸ್ಥಿತಿ ಹೇಗಾಗಿದೆ. ಒಂದು ಸಾಮಾನ್ಯ ಪರಿಜ್ಞಾನ ಇಲ್ಲ. ಎಲ್ಲಾ ತಪ್ಪುಗಳನ್ನು ಸಮರ್ಥನೆ ಮಾಡೋದು ಒಂದು ಸಾಧನೆನಾ?? ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. ಬರಬೇಕಾದ ತೆರಿಗೆ ಹಣವಿಲ್ಲ. ಇದ್ಯಾವುದನ್ನು ಕೇಂದ್ರದ ಬಳಿ ಕೇಳುವ ಗಂಡಸು ನೀವ್ಯಾರು ಅಲ್ಲಾ. ನಿಜಕ್ಕೂ ನಿಮ್ಮನ್ನೆಲ್ಲಾ ಆಯ್ಕೆ ಮಾಡಿದ ನಾವುಗಳೇ ಮೂರ್ಖರು ಎಂದು ಪುನಿತ್ ಬಿ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೆಗೆಯಕ್ಕೆ ಹೋದರಂತೆ ಹಾಗೆ ಆಯಿತು ಎಂದು ಸುರೇಶ್ ಎನ್.ಗೌಡ ಎಂಬವರು ಕಮೆಂಟಿಸಿದ್ದು, ರೀ ಸ್ವಾಮಿ ನಿಮಗೆ ಸ್ವಲ್ಪನೂ ನಾಚಿಕೆ ಮಾನ ಮರ್ಯಾದೆ ಇಲ್ಲ ಅನ್ಸುತ್ತೆ. ಒಂದು ವರ್ಷದಿಂದ ಏನು ಮಾಡಿದ್ದೀರ ಅದನ್ನು ಹೇಳಿ. ನಮ್ಮ ಕಡೆ ಒಂದು ಗಾದೆ ಇದೆ, ಮಳೆ ಬಂದಾಗ ಮನೆ ಮೇಲೆ ಕೈ, ಅಂಬಲಿ ಕುಡಿದಾಗ ಮೀಸೆ ಮೇಲೆ ಕೈ ಅಂತಾ ಈ ಮಾತು ನಿಮ್ಮ ಎರಡೂ ಸರ್ಕಾರಗಳಿಗೂ ಅನ್ವಯವಾಗುತ್ತೆ ಎಂದು ಸುರೇಶ್ ಸುರಿ ಎಂಬವರು ತಿಳಿಸಿದ್ದಾರೆ.

ಥೂ....ನಿಮ್ಮ ಜನ್ಮಕ್ಕೆ ಇಷ್ಟು, ಎಲ್ಲ ಜನ ಸತ್ತ ಮೇಲೆ ಮಾಡಿ. ಕಳೆದ ಬಾರಿ 10,000 ಬೆಡ್ ಇಲ್ಲ ವೆಂಟಿಲಟರ್ ಇಲ್ಲ. ಒಂದು ವರ್ಷದ ಅವಧಿಯಲ್ಲಿ ಏನು ಮಾಡಿಲ್ಲ. ಮಾಡಿದ್ದು ಚುನಾವಣೆ ಪ್ರಚಾರ, ಬಯಸಿದ್ದಕ್ಕೆ ಬಿಜೆಪಿ ಜನರಿಗೆ ಬಾಯಿಗೆ ಮಣ್ಣು ಹಾಕಿಬಿಟ್ಟಿರಿ ಎಂದು ಸೋಮಶೇಕರ ಪಾಂಡವಪುರ ಎಂಬವರು ಟೀಕಿಸಿದ್ದಾರೆ. 

ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆಯ.? ಇನ್ನೂ ಎಷ್ಟು ಶೀಘ್ರ ಸ್ವಾಮಿ. ಕಳೆದ ವರ್ಷ ಲಾಕ್‌ಡೌನ್ ಆರಂಭಕ್ಕೂ ಮುನ್ನ ಜನರಿಂದ ಉದ್ಯೋಗಪತಿಗಳಿಂದ ಪಡೆದ ಪಿಎಂ ಕೇರ್ಸ್ ಫಂಡ್ ಇನ್ನೂ ಬಳಕೆ ಆಗಿಲ್ಲ. ಯಾವಾಗ ಹೇಗೆ ಬಳಸುತ್ತೀರಿ ? ದೇಶದ ಜನಸಂಖ್ಯೆ ಕಡಿಮೆ ಆದ ಮೇಲೇ ? ಊಟಕ್ಕಿಲ್ಲದ ಉಪ್ಪಿನಕಾಯಿ ಎಂದು ವಿನಾಯಕ ಕಾರಂತ ಎಂಬವರು ತಿಳಿಸಿದ್ದಾರೆ. 

ಕಳೆದ ಅಕ್ಟೋಬರ್ ನಲ್ಲಿ ಸ್ಥಾಪಿಸಲ್ಪಡುತ್ತವೆಯೆಂದು ಹೇಳಿದ 162 ಪಿಎಸ್ಎ ಘಟಕಗಳಲ್ಲಿ ಎಷ್ಟು ರಾಜ್ಯಗಳಲ್ಲಿ ಇದುವರೆಗೆ ಎಷ್ಟು ಘಟಕಗಳು ಸ್ಥಾಪಿಸಲ್ಪಟ್ಟಿವೆ ಹಾಗೂ ಅವುಗಳಲ್ಲಿ ಎಷ್ಟು ಕಾರ್ಯ ನಿರ್ವಹಿಸುತ್ತಿವೆಯೆಂದು ಮೊದಲು ಆಡಿಟ್ ಕೊಡಿ ಸಂಸದರೆ. ಒಂದು PSA ಘಟಕ ಸ್ಥಾಪಿಸಲು ಹೆಚ್ಚೆಂದರೆ 30-40 ಲಕ್ಷ ರುಪಾಯಿ ಖರ್ಚಿದೆ. ಅಂಥದ್ದರಲ್ಲಿ 162 ಘಟಕಗಳಿಗೆ 200 ಕೋಟಿ ಹೇಗೆ ಖರ್ಚಾಯಿತೆಂದು ಒಮ್ಮೆ ಹೇಳುವಿರಾ? 162 ಘಟಕಗಳನ್ನು ಸ್ಥಾಪಿಸಲು ಕೇಂದ್ರ ಸರಕಾರ ಕೊಟ್ಟ ಟೆಂಡರನ್ನು ಪಡೆದ ಕಂಪನಿಗಳಲ್ಲಿ ಒಂದೆರಡು ಇತ್ತೀಚಿಗೆ ಬ್ಲಾಕ್ ಲಿಸ್ಟ್ ಗೆ ಸೇರಿಸಲ್ಪಟ್ಟಿವೆಯಲ್ಲಾ, ಅದರ ಬಗ್ಗೆ ಒಂದು ಪೋಸ್ಟರ್ ಮಾಡೋಣವೇ? ಎಂದು ಆಲ್ಮೈಡಾ ಗ್ಲಾಡ್ಸನ್ ಎಂಬವರು ತಿಳಿಸಿದ್ದಾರೆ.

ನಮಗೆ ಕೊರೋನವನ್ನು ಎದುರಿಸಲು ಆಕ್ಸಿಜನ್ ಘಟಕಗಳ ಅಗತ್ಯತೆಯಿದೆಯೆಂದು ಕಳೆದ ವರುಷ ಈ ಹೊತ್ತಿಗೆಲ್ಲಾ ತಿಳಿದಿತ್ತು. ಆದರೂ ಅಕ್ಟೋಬರ್ ತನಕ ಕೇಂದ್ರ ಸರಕಾರ ಇದರ ಬಗ್ಗೆ ತಲೆಕೆಡಿಸಿಕೊಳ್ಳದಿದ್ದದರ ಬಗ್ಗೆ ಮತ್ತೊಂದು ಪೋಸ್ಟರ್ ಮಾಡೋಣವೇ? ಈಗ ಅನುಮೋದಿಸಲ್ಪಟ್ಟಿರುವ 551 ಪಿಎಸ್ಎ ಘಟಕಗಳಿಗೆ ತಗಲುಗ ಖರ್ಚೆಷ್ಟು ಹಾಗೂ ಈ ಘಟಕಗಳು ಯಾವಾಗ ಕಾರ್ಯಾರಂಭ ಮಾಡಲಿವೆ. ಈ 551 ಘಟಕಗಳಲ್ಲಿ ಕರ್ನಾಟಕಕ್ಕೆ ಎಷ್ಟು ಸಿಗಲಿವೆ? ಹಿಂದಿನ 162 ಘಟಕಗಳಲ್ಲಿ ಕರ್ನಾಟಕಕ್ಕೆ ಸಿಕ್ಕ ಘಟಕಗಳೆಷ್ಟು? ಎಂದು ಅವರು ಪ್ರಶ್ನಿಸಿದ್ದಾರೆ.

'ಜವಾಬ್ದಾರಿ ಇಲ್ಲದ ರಾಜಕಾರಣಿಗಳು ನೀವೆಲ್ಲ.. ಹೋದ ವರ್ಷ ಆದ ಘಟನೆಯಿಂದ ಎಚ್ಚೆತ್ತುಕೊಳ್ಳದೆ ಈಗ ಜನ ಸಾಯುತ್ತಿರುವಾಗ ಪುಂಗದಾಸನ ಹಾಗೆ ಮಾತನಾಡುತ್ತೀರಲ್ಲಾ, ನಾಚಿಕೆಯಾಗಬೇಕು ನಿಮಗೆ. ಶೇಮ್ ಶೇಮ್ !! ಎಂದು ಸುರೇಶ್ ಗುಡಿಬಂಡೆ ಎಂಬವರು ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಎಷ್ಟು ಸ್ಥಾಪನೆಯಾಗಿದೆ ಮೊದಲು ತಿಳಿಸಿ. ನೀವು ಇದನ್ನೆಲ್ಲ ತರುವ ಹೊತ್ತಿಗೆ ಇಡೀ ಊರೇ ಸ್ಮಶಾನವಾಗಿ ಹೋಗಿರುತ್ತದೆ. ಮೊದಲು ಮಾತು ನಿಲ್ಲಿಸಿ ಕೆಲಸ ಮಾಡಿ ತೋರಿಸಿ. ನಿಮ್ಮನ್ನು ಸಮರ್ಥಿಸಿ ಗೆಲ್ಲಿಸಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಶರತ್ ಜೈ ಎಂಬವರು ಕಮೆಂಟ್ ಮಾಡಿದ್ದಾರೆ.

ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ದೇಶದಾದ್ಯಂತದ ಜಿಲ್ಲಾ ಕೇಂದ್ರಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಪಿಎಸ್‌ಎ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ.

Posted by Pratap Simha on Sunday, 25 April 2021
share
ವಾರ್ತಾಭಾರತಿ
ವಾರ್ತಾಭಾರತಿ
Next Story
X