ಪ್ರಧಾನಿ ಮೋದಿ ದೊಡ್ಡಮ್ಮ ನರ್ಮದಾಬೆನ್ ಕೋವಿಡ್ ಚಿಕಿತ್ಸೆಯ ನಡುವೆ ನಿಧನ

ಅಹ್ಮದಾಬಾದ್: ಕೊರೋನ ವೈರಸ್ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡಮ್ಮ ನರ್ಮದಾ ಬೆನ್ ಅಹ್ಮದಾಬಾದ್ ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು timesofindia.com ವರದಿ ಮಾಡಿದೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ನರ್ಮದಾ ಬೆನ್ ರವರು ನ್ಯೂ ರಾಣಿಪ್ ಪ್ರದೇಶದ ನಗರದಲ್ಲಿ ತಮ್ಮ ಮಕ್ಕಳೊಂದಿಗೆ ವಾಸವಾಗಿದ್ದರು ಎಂದು ವರದಿ ಉಲ್ಲೇಖಿಸಿದೆ.
"ನಮ್ಮ ದೊಡ್ಡಮ್ಮ ನರ್ಮದಾ ಬೆನ್ ರವರು ಕೋವಿಡ್ ಪೀಡಿತರಾದ ಕಾರಣ ಅವರನ್ನು ಅಹ್ಮದಾಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹತ್ತು ದಿನಗಳಿಂದ ಕೊರೋನ ವೈರಸ್ ಕಾರಣದಿಂದಾಗಿ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಇಂದು ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ" ಎಂದು ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ತಿಳಿಸಿದ್ದಾರೆ.
ನರ್ಮದಾ ಬೆನ್ ರ ಪತಿ ನರೇಂದ್ರ ಮೋದಿಯವರ ತಂದ ದಾಮೋದರ್ ದಾದ್ ರವರ ಸಹೋದರ ಜಗ ಜೀವನ್ ದಾಸ್ ಹಲರು ವರ್ಷಗಳ ಹಿಂದೆ ಮೃತಪಟ್ಟಿದ್ದರು ಎಂದೂ ಪ್ರಹ್ಲಾದ್ ಜೋಶಿ ತಿಳಿಸಿದ್ದಾಗಿ ವರದಿ ಉಲ್ಲೇಖಿಸಿದೆ.