ಉಡುಪಿ: ಬಂದ್ ಮಾಡದೆ ವ್ಯಾಪಾರ ನಡೆಸಿದ 30 ಅಂಗಡಿಗಳಿಗೆ 80,500ರೂ. ದಂಡ

ಉಡುಪಿ, ಎ.27: ಜಿಲ್ಲಾಡಳಿತದ ಆದೇಶದ ನಡುವೆಯೂ ಉಡುಪಿ ನಗರದಲ್ಲಿ ವ್ಯಾಪಾರ ನಡೆಸುತ್ತಿದ್ದ ಕೆಲವು ಅಂಗಡಿಗಳಿಗೆ ನಗರಸಭೆ ಅಧಿಕಾರಿಗಳ ತಂಡ ಇಂದು ದಾಳಿ ನಡೆಸಿ ದಂಡ ವಿಧಿಸಿದೆ.
ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ರಥಬೀದಿ, ಮಸೀದಿ ರಸ್ತೆ, ಕೆಎಂ ಮಾರ್ಗ, ಮಣಿಪಾಲದಲ್ಲಿ ವ್ಯಾಪಾರ ನಡೆಸುತ್ತಿದ್ದ ಬಟ್ಟೆ ಸೇರಿದಂತೆ ಇತರ ಸುಮಾರು 30 ಅಂಗಡಿಗಳಿಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ, 80,500 ರೂ. ದಂಡ ವಸೂಲಿ ಮಾಡಿದೆ.
ಅಗತ್ಯ ವಸ್ತುಗಳ ಹೊರತು ಪಡಿಸಿ ಉಳಿದಂತೆ ಯಾವುದೇ ಅಂಗಡಿಗಳು ತೆರೆಯದಂತೆ ಈಗಾಗಲೇ ಜಿಲ್ಲಾಡಳಿತ ಆದೇಶ ನೀಡಿದ್ದು, ಆದರೂ ಕೆಲವೊಂದು ಅಂಗಡಿಯವರು ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಅದರಂತೆ ದಾಳಿ ನಡೆಸಿ, ಕನಿಷ್ಠ 2000ರೂ.ನಿಂದ ಗರಿಷ್ಠ 10ಸಾವಿರ ರೂ.ವರೆಗೆ ದಂಡ ವಿಧಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಡಾ.ಉದಯ ಶೆಟ್ಟಿ ತಿಳಿಸಿದ್ದಾರೆ.
Next Story







