ಮೃತ ತಾಯಿಯ ಮುಖ ನೋಡಲು ಕಟ್ಟಡ ಏರಲು ಯತ್ನಿಸಿದ ಪುತ್ರ
ಕಲಬುರ್ಗಿ, ಎ.27: ಕೋವಿಡ್ ಸೋಂಕಿನಿಂದ ಮೃತಪಟ್ಟ ತಾಯಿಯ ಮುಖ ನೋಡಲಿಕ್ಕೆ ಅನುಮತಿ ನೀಡಲಿಲ್ಲ ಎಂದು ಯುವಕನೊಬ್ಬ ಬಹುಮಹಡಿ ಕಟ್ಟಡ ಏರಲು ಯತ್ನಿಸಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಇತ್ತೀಚಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ ತಾಯಿ ಮಂಗಳವಾರ ಬೆಳಗ್ಗೆ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ನೊಂದ ಯುವಕ ಮತ್ತು ಯುವಕನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಒಮ್ಮೆ ತಾಯಿ ಮುಖ ನೋಡಲು ಬಿಡಿ ಎಂದು ಸಿಬ್ಬಂದಿಯನ್ನು ಪರಿಪರಿಯಾಗಿ ಕೇಳಿದರೂ ಅವರು ಒಪ್ಪದಿದ್ದಾಗ, ಬಹು ಮಹಡಿ ಜಿಮ್ಸ್ ಕಟ್ಟಡವನ್ನು ಏರಲು ಯತ್ನಿಸಿದ್ದಾರೆ.
ಅರ್ಧದಷ್ಟು ಕಟ್ಟಡ ಏರಿದ್ದನ್ನು ಕಂಡು ಸಿಬ್ಬಂದಿ ಆತನ ಮನವೊಲಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಮುಂಭಾಗದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
Next Story





