ಕೋವಿಡ್ ವಿರುದ್ಧ ಭಾರತದ ಹೋರಾಟಕ್ಕೆ ದೇಣಿಗೆ ನೀಡಿದ ಬ್ರೆಟ್ ಲೀ

ಹೊಸದಿಲ್ಲಿ: ತನ್ನದೇ ದೇಶದ ಪ್ಯಾಟ್ ಕಮಿನ್ಸ್ ಅವರಿಂದ ಸ್ಫೂರ್ತಿ ಪಡೆದ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ ಒಂದು ಬಿಟ್ ಕ್ವಾಯ್ನ್ (ಸುಮಾರು 40 ಲಕ್ಷ ರೂ.)ದೇಣಿಗೆ ನೀಡಲು ನಿರ್ಧರಿಸಿದ್ದಾರೆ.
ಕೋವಿಡ್-19 ಎರಡನೇ ಅಲೆಯಿಂದ ಜರ್ಝರಿತವಾಗಿರುವ ಭಾರತದ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಸಲು ಪಿಎಂ ಕೇರ್ಸ್ ನಿಧಿಗೆ ಸೋಮವಾರ 50,000 ಡಾಲರ್ ದೇಣಿಗೆ ನೀಡಿದ್ದ ಕಮಿನ್ಸ್ ಎಲ್ಲರ ಹೃದಯ ಗೆದ್ದಿದ್ದರು.
ಈಗಿನ ಸಾಂಕ್ರಾಮಿಕ ರೋಗದಿಂದ ಜನರು ಕಂಗಾಲಾಗಿರುವುದನ್ನು ನೋಡಿ ನನಗೆ ತುಂಬಾ ಬೇಸರವಾಗಿದೆ. ನಾನು ಬದಲಾವಣೆ ಮಾಡುವಂತಹ ಸ್ಥಾನದಲ್ಲಿರುವ ಕಾರಣ ಭಾರತದಾದ್ಯಂತ ಆಸ್ಪತ್ರೆಗಳಿಗೆ ಆಕ್ಸಿಜನ್ ಖರೀದಿಗೆ ನೆರವಾಗಲು ಒಂದು ಬಿಟಿಸಿ (ಬಿಟ್ ಕ್ವಾಯ್ನ್) ದೇಣಿಗೆ ನೀಡಲು ಬಯಸಿದ್ದೇನೆ ಎಂದು ಬ್ರೆಟ್ ಲೀ ಟ್ವೀಟ್ ಮಾಡಿದ್ದಾರೆ.
ಬ್ರೆಟ್ ಲೀ ಪ್ರಸ್ತುತ ಐಪಿಎಲ್ ನಲ್ಲಿ ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Next Story





