ಜನರು ಸಾಯಬೇಕೆಂದು ಕೇಂದ್ರ ಸರಕಾರವು ಬಯಸಿದಂತೆ ಕಾಣುತ್ತಿದೆ: ದಿಲ್ಲಿ ಹೈಕೋರ್ಟ್ ತರಾಟೆ
ರೆಮ್ ಡೆಸಿವಿರ್ ಬಳಕೆಗೆ ಹೊಸ ಶಿಷ್ಟಾಚಾರ

ಹೊಸದಿಲ್ಲಿ: ಕೋವಿಡ್ -19 ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಅನ್ನು ಬಳಸುವ ಹೊಸ ಪ್ರೋಟೋಕಾಲ್ ಪ್ರಕಾರ ಜನರು ಸಾಯಬೇಕೆಂದು ಕೇಂದ್ರ ಬಯಸಿದಂತೆ ಕಾಣುತ್ತಿದೆ ಎಂದು ದಿಲ್ಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
"ಆಕ್ಸಿಜನ್ ನೆರವು ಬೇಕಾದವರಿಗೆ ಮಾತ್ರ ರೆಮ್‌ಡೆಸಿವಿರ್ ನೀಡಲಾಗುವುದು ಎನ್ನುವುದು ತಪ್ಪು. ಈಗ ಆಮ್ಲಜನಕವಿಲ್ಲದ ಜನರಿಗೆ ರೆಮ್‌ಡೆಸಿವಿರ್ ಸಿಗುವುದಿಲ್ಲ. ಜನರು ಸಾಯಬೇಕೆಂದು ನೀವು ಬಯಸಿದಂತೆ ಕಾಣುತ್ತಿದೆ" ಎಂದು ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಕೇಂದ್ರ ಸರಕಾರಕ್ಕೆ ತಿಳಿಸಿದರು.
ಔಷಧದ ಕೊರತೆಯನ್ನು ಕಡಿಮೆ ಮಾಡಲು ಕೇಂದ್ರವು ಪ್ರೋಟೋಕಾಲ್ ಅನ್ನು ಬದಲಾಯಿಸುತ್ತಿದೆ. "ಇದು ಸಂಪೂರ್ಣ ದುರ್ಬಳಕೆ" ಎಂದು ಹೈಕೋರ್ಟ್ ಹೇಳಿದೆ.
Next Story