ವೈದ್ಯಕೀಯ ಉದ್ದೇಶದ ಆಕ್ಸಿಜನ್ ಲಭ್ಯವಾಗುವಂತಾಗಲು ತನ್ನ ಘಟಕಗಳನ್ನು ಬಂದ್ ಮಾಡಲು ನಿರ್ಧರಿಸಿದ ಮಾರುತಿ ಸುಝುಕಿ

ಹೊಸದಿಲ್ಲಿ: ವೈದ್ಯಕೀಯ ಅಗತ್ಯತೆಗಳಿಗೆ ಆಕ್ಸಿಜನ್ ಲಭ್ಯವಾಗುವಂತಾಗುವ ಉದ್ದೇಶದಿಂದ ದೇಶದ ಅತ್ಯಂತ ದೊಡ್ಡ ಕಾರು ಉತ್ಪಾದಕಾ ಸಂಸ್ಥೆ ಮಾರುತಿ ಸುಝುಕಿ ತನ್ನ ಹರ್ಯಾಣದ ಉತ್ಪಾದನಾ ಘಟಕಗಳನ್ನು ಬಂದ್ ಮಾಡಿದೆ. ಗುಜರಾತ್‍ನಲ್ಲಿರುವ ತನ್ನ ಉತ್ಪಾದನಾ ಘಟಕವನ್ನೂ ಇದೇ ಕಾರಣಕ್ಕಾಗಿ ಬಂದ್ ಮಾಡಲು ಸುಝಿಕಿ ಮೋಟಾರ್ ನಿರ್ಧರಿಸಿದೆ.
ಈ ಹಿಂದೆ ಕಂಪೆನಿ ತನ್ನ ವಾರ್ಷಿಕ ನಿರ್ವಹಣಾ ಉದ್ದೇಶದ ಮುಚ್ಚುಗಡೆಯನ್ನು ಜೂನ್ ತಿಂಗಳಲ್ಲಿ ನಡೆಸಲು ಉದ್ದೇಶಿಸಿತ್ತಾದರೂ ಅದನ್ನೀಗ ಮೇ 1ರಿಂದ ಜಾರಿಗೆ ತರಲು ನಿರ್ಧರಿಸಿದೆಯಲ್ಲದೆ ಜೀವಗಳನ್ನು ಉಳಿಸಲು ಹೆಚ್ಚು ಆಕ್ಸಿಜನ್ ಲಭ್ಯವಾಗುವಂತೆ ಮಾಡುವುದು ತನ್ನ ಉದ್ದೇಶವೆಂದು ಹೇಳಿದೆ.
Next Story