ರಾಜ್ಯಗಳಿಗೆ ಕೋವಿಶೀಲ್ಡ್ ಪ್ರತಿ ಡೋಸ್ ಬೆಲೆ ಇಳಿಸಿದ ಸೀರಮ್ ಇನ್ ಸ್ಟಿಟ್ಯೂಟ್

ಪುಣೆ: ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯ ದರ ಪ್ರತಿ ಡೋಸ್ ಗೆ ರಾಜ್ಯಗಳಿಗೆ 400 ರೂ. ಬದಲಿಗೆ 300 ರೂ. ವೆಚ್ಚ ತಗಲಲಿದೆ ಎಂದು ಕಂಪೆನಿಯ ಸಿಇಒ ಆದರ್ ಪೂನವಾಲಾ ಬುಧವಾರ ಟ್ವೀಟಿಸಿದ್ದಾರೆ.
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಪರವಾಗಿ ಲೋಕೋಪಕಾರಿ ಸೂಚಕವಾಗಿ ನಾನು ರಾಜ್ಯಗಳಿಗೆ ಲಸಿಕೆಯ ದರ ಪ್ರತಿ ಡೋಸ್ ಗೆ 400 ರೂ.ನಿಂದ 300 ರೂ. ಇಳಿಸುತ್ತೇನೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ರಾಜ್ಯಗಳ ಸಾವಿರಾರು ಕೋಟಿ ರೂ. ನಿಧಿಯನ್ನು ಉಳಿಸುತ್ತದೆ. ಹೆಚ್ಚಿನ ವ್ಯಾಕ್ಸಿನೇಶನ್ ಮೂಲಕ ಅಸಂಖ್ಯಾತ ಜೀವಗಳನ್ನು ಉಳಿಸುತ್ತದೆ ಎಂದು ಪೂನವಾಲಾ ಟ್ವೀಟ್ ನಲ್ಲಿ ಬರೆದಿದ್ದಾರೆ.
Next Story