ಹಿರಿಯ ಕಾಂಗ್ರೆಸ್ ಮುಖಂಡ ಏಕನಾಥ್ ಗಾಯಕ್ವಾಡ್ ಕೋವಿಡ್ ನಿಂದ ನಿಧನ

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಿರಿಯ ಮುಖಂಡ ಏಕನಾಥ ಗಾಯಕ್ವಾಡ್ (81 ವರ್ಷ)ಅವರು ಕೋವಿಡ್ ನಿಂದಾಗಿ ಬುಧವಾರ ನಿಧನರಾದರು ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದ ಶಾಲಾ ಶಿಕ್ಷಣ ಸಚಿವೆ ವರ್ಷಾ ಗಾಯಕ್ವಾಡ್ ಅವರ ತಂದೆ ಏಕನಾಥ ಗಾಯಕ್ವಾಡ್ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗ್ಗೆ ನಿಧನರಾದರು ಎಂದು ಮೂಲಗಳು ತಿಳಿಸಿವೆ.
"ಏಕನಾಥ್ ಅವರು ನನಗೆ ಮಾರ್ಗದರ್ಶಕ ಹಾಗೂ ತಂದೆಯಿದ್ದಂತೆ. ಅವರ ನಿಧನದಿಂದ ನನಗೆ ಬಹಳ ಬೇಸರವಾಗಿದೆ. ಏಕನಾಥ್ ಅವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ'' ಎಂದು ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಸಂತಾಪ ಸೂಚಿಸಿದರು.
ಏಕನಾಥ್ ಗಾಯಕ್ವಾಡ್ ಅವರು ಮುಂಬೈನ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
Next Story