ಮಾಧ್ಯಮಗಳು ಮೈಮರೆತಿದ್ದರಿಂದ ಕೊರೋನ ಪ್ರಕರಣಗಳು ಏರಿಕೆ: ಸಂಸದ ಪ್ರತಾಪ್ ಸಿಂಹ

ಮೈಸೂರು,ಎ.28: ಸರ್ಕಾರ ಮತ್ತು ಮಾಧ್ಯಮಗಳು ಮೈಮರೆತಿದ್ದರಿಂದ ಕೊರೋನ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಯಿತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ ಕೊರೋ ಅಲೆ ಬಂತು. ಆಗ ಮಾಧ್ಯಮಗಳು ಜಾಗೃತಿ ಮೂಡಿಸಿದವು. ಅಕ್ಟೋಬರ್, ನವೆಂಬರ್ ನಂತರ ಮಾಧ್ಯಮದವರು ಮೈಮರೆತರು. ಸರ್ಕಾರವೂ ವಿಳಂಬ ಮಾಡಿತು. ಹಾಗಾಗಿ ಕೊರೋನ ಹೆಚ್ಚಳವಾಗಲು ಕಾರಣವಾಯಿತು ಎಂದರು.
ನಾವೆಲ್ಲರೂ ಕೊರೋನ ಹೊರಟೇ ಹೋಯಿತು ಎಂದುಕೊಂಡಿದ್ದೆವು. ಆದರೆ ಅದು ಮತ್ತೆ ಬಂದು ಅಪ್ಪಳಿಸಿದೆ. ಈ ಮೊದಲು ಯುಕೆ, ಸ್ಟ್ರೇನ್, ಆಫ್ರಿಕನ್ ಸ್ಟ್ರೇನ್ ರಾಷ್ಟ್ರಗಳು ಕೊರೋನ ಹಾಟ್‍ಸ್ಪಾಟ್ ಎನ್ನಲಾಗುತ್ತಿತ್ತು. ಈಗ ಬೆಂಗಳೂರು ಕೊರೋನ ಹಾಟ್‍ಸ್ಪಾಟ್ ಎಂದು ಹೇಳಲಾಗುತ್ತಿದೆ. ಇದು ನಿರೀಕ್ಷೆಗೂ ಮೀರಿದ್ದು ಎಂದು ಹೇಳಿದರು.
Next Story





