ಕೋವಿಡ್ ಲಸಿಕೆಗೆ ಕೇವಲ 3 ಗಂಟೆಯಲ್ಲಿ 80 ಲಕ್ಷ ಜನರಿಂದ ಹೆಸರು ನೋಂದಣಿ

ಹೊಸದಿಲ್ಲಿ: ಸರಕಾರದ ವೆಬ್ ಸೈಟ್ ಕೋವಿನ್ ಬುಧವಾರ ಸಂಜೆ 4ರಿಂದ ಕೋವಿಡ್ ಲಸಿಕೆಯ ನೋಂದಣಿಗೆ ತೆರೆದುಕೊಂಡಿದ್ದು , ನೋಂದಣಿ ಪ್ರಕ್ರಿಯೆ ಆರಂಭವಾಗಿ ಕೇವಲ 3 ಗಂಟೆಗಳಲ್ಲಿ ಸುಮಾರು 80 ಲಕ್ಷ ಮಂದಿ ತಮ್ಮಹೆಸರು ನೋಂದಾಯಿಸಿದರು.
18ರಿಂದ 44 ವರ್ಷದೊಳಗಿನವರು ಮೇ 1ರಿಂದ(ಶನಿವಾರ)ಕೋವಿಡ್ ಲಸಿಕೆಗಳನ್ನು ಪಡೆಯಬಹುದು ಎಂದು ಸರಕಾರ ತಿಳಿಸಿದೆ.
ಆರಂಭದಲ್ಲಿ ವೆಬ್ ಸೈಟ್ ನಲ್ಲಿ ಸರ್ವರ್ ಸಮಸ್ಯೆ ಕಾಣಿಸಿಕೊಂಡು ಸ್ವಲ್ಪ ಸಮಯ ಸ್ಥಗಿತಗೊಂಡಿತ್ತು. ಸರಕಾರಿ ಹಾಗೂ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಭ್ಯವಿರುವ ಸ್ಲಾಟ್ ಗಳ ಆಧಾರದ ಮೇಲೆ ಅಪಾಯಿಂಟ್ ಮೆಂಟ್ ನೀಡಲಾಗುತ್ತದೆ ಸರಕಾರಿ ಮೂಲಗಳು ತಿಳಿಸಿವೆ.
ವ್ಯಾಕ್ಸಿನ್ ತೆಗೆದುಕೊಳ್ಳಲು ಬಯಸುವರರು https://www.cowin.gov.in/home ಗೆ ಹೋಗಬೇಕು. ರಿಜಿಸ್ಟರ್/ಸೈನ್-ಇನ್ ಗೆ ಕ್ಲಿಕ್ ಮಾಡಬೇಕು.
ಕೋವಿನ್ ಪೋರ್ಟಲ್ ಕಾರ್ಯನಿರ್ವಹಿಸುತ್ತಿದೆ. ಸಂಜೆ 4 ಗಂಟೆಗೆ ಸಣ್ಣ ತೊಂದರೆ ಕಂಡುಬಂದಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರು ಹೆಸರು ನೋಂದಾಯಿಸಬಹುದು ಎಂದು ಕೇಂದ್ರ ಸರಕಾರದ ಆರೋಗ್ಯ ಸೇತು ಆ್ಯಪ್ ತಿಳಿಸಿದೆ.





