ಕೋವಿಡ್ ಕರ್ಫ್ಯೂ: ಕೂಲಿ ಕಾರ್ಮಿಕರ ಪಾಸ್ ಬಗ್ಗೆ ಗೊಂದಲ

ಕುಂದಾಪುರ, ಎ.28: ಕೋವಿಡ್ ಕರ್ಫ್ಯೂನಲ್ಲಿ ಕೆಲಸಕ್ಕೆ ಹೋಗಲು ಸರಕಾರದ ಆದೇಶ ಇದ್ದರೂ ಕೆಲವು ಗೊಂದಲದಿಂದಾಗಿ ಕುಂದಾಪುರದಲ್ಲಿ ದಿನಕೂಲಿ ಕಾರ್ಮಿಕರು ಪದಾಡುವ ಪ್ರಸಂಗ ಕಂಡು ಬಂತು.
ರಸ್ತೆ ಮೇಲೆ ಓಡಾಡಲು ನಿರ್ಬಂಧ ಇರುವುದರಿಂದ ಪಾಸ್ಗಾಗಿ ಗೊಂದಲ ಉಂಟಾಯಿತು. ಕೂಲಿ ಕಾರ್ಮಿಕರಿಗೆ ಓಡಾಡಲು ಪಾಸ್‌ನ್ನು ಪೊಲೀಸರೋ, ಪಂಚಾಯತ್ನವರೋ, ತಹಸೀಲ್ದಾರರೋ ಅಥವಾ ಜಿಲ್ಲಾಡಳಿತ ನೀಡಬೇಕೆ ಎಂಬುದರ ಬಗ್ಗೆ ಗೊಂದಲ ಉಂಟಾಗಿತ್ತು.
ಕುಂದಾಪುರ ತಾಲೂಕು ಸಂಪೂರ್ಣ ಬಂದ್ ಆಗಿದ್ದು, ಅಲ್ಲಲ್ಲಿ ಪೊಲೀಸ್ ಸರ್ಪಗಾವಲು ಇಟ್ಟು ಬಿಗು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಹಾಗೂ ಎಸ್ಸೈ ಸದಾಶಿವ ಗವರೋಜಿ ಟ್ರಾಫಿಕ್ ಎಸ್ಸೈ ಸುದರ್ಶನ್ ವಾಹನಗಳ ತಾಪಸಣೆ ನಡೆಸಿದರು. ಆಸ್ಪತ್ರೆ, ಮೆಡಿಕಲ್ಗೆ ಹೋಗುವವರಿಗೆ ಎಚ್ಚರಿಕೆ ನೀಡಿ ಬಿಡಲಾಯಿತು.
ಸರಕಾರ ಆದೇಶದಂತೆ ಬ್ಯಾಂಕ್, ಸರಕಾರಿ ಕಚೇರಿಗಳು ಬಹುತೇಕ ತೆರೆದಿದ್ದು ಜನರು ದಿನನಿತ್ಯದ ವ್ಯವಹಾರಗಳ ಓಡಾಟಕ್ಕೆ ಸಾಧ್ಯವಾಗದೆ ಬ್ಯಾಂಕ್, ಕಚೇರಿಗಳು ತೆರೆದಿದ್ದು ತೆರೆದಿಲ್ಲದಂತಾಗಿದೆ. ಅಗತ್ಯ ಓಡಾಟಕ್ಕೂ ಪೊಲೀಸರು ತಡೆಯೊಡ್ಡುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.





