ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಗೆ ಕೋವಿಡ್ ಪಾಸಿಟಿವ್

ಹೊಸದಿಲ್ಲಿ: ನನಗೆ ನೊವಲ್ ಕೊರೋನ ವೈರಸ್ ದೃಢಪಟ್ಟಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇಂದು ಹೇಳಿದ್ದಾರೆ.
ಟ್ವೀಟರ್ ನಲ್ಲಿ ಸಂಕ್ಷಿಪ್ತವಾಗಿ ಈ ಕುರಿತು ಮಾಹಿತಿ ನೀಡಿರುವ ಗೆಹ್ಲೋಟ್, ನಾನೀಗ ಆರೋಗ್ಯವಾಗಿದ್ದೇನೆ. ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
69ರ ಹರೆಯದ ಕಾಂಗ್ರೆಸ್ ನಾಯಕ ಗೆಹ್ಲೋಟ್ ಅವರ ಪತ್ನಿಗೆ ಕೋರೊನ ಪಾಸಿಟಿವ್ ಆದ ಬಳಿಕ ಅವರು ಬುಧವಾರದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಇಂದು ನಾನು ಪಡೆದಿರುವ ಕೋವಿಡ್ ಟೆಸ್ಟ್ ವರದಿಯಲ್ಲಿ ಪಾಸಿಟಿವ್ ಬಂದಿದೆ. ನನ್ನಲ್ಲಿ ರೋಗ ಲಕ್ಷಣಗಳಿದ್ದವು. ಇದೀಗ ಆರೋಗ್ಯವಾಗಿದ್ದೇನೆ. ಶಿಷ್ಟಾಚಾರವನ್ನು ಪಾಲಿಸುತ್ತಾ ಐಸೋಲೇಶನ್ ನಲ್ಲಿ ಕೆಲಸವನ್ನು ಮುಂದುವರಿಸುವೆ ಎಂದು ಗೆಹ್ಲೋಟ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ತನ್ನ ಪತ್ನಿ ಸುನೀತಾ ಗೆಹ್ಲೋಟ್ ಗೆ ಕೋವಿಡ್ ರೋಗ ಲಕ್ಷಣವಿಲ್ಲದಿದ್ದರೂ ಶಿಷ್ಟಾಚಾರದ ಪ್ರಕಾರ ಹೋಮ್ ಐಸೋಲೇಶನ್ ನಲ್ಲಿ ಮನೆಯಲ್ಲೇ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಗೆಹ್ಲೋಟ್ ಬುಧವಾರ ಟ್ವೀಟಿಸಿದ್ದರು.
Next Story