ನಿರಂಜನ ಅಖಾಡದ ಶ್ರಾವಣ್‍ನಾಥ್ ಮಠದ ಅಧ್ಯಕ್ಷ ಶ್ರೀಮಂತ ಲಖನ್ ಗಿರಿ ಕೋವಿಡ್‍ನಿಂದ ನಿಧನ
ಡೆಹ್ರಾಡೂನ್(ಉತ್ತರಾಖಂಡ): ಶ್ರೀ ನಿರಂಜನ ಅಖಾಡದ ಶ್ರಾವಣನಾಥ್ ಮಠದ ಅಧ್ಯಕ್ಷರಾಗಿರುವ ಶ್ರೀಮಂತ ಲಖನ್ ಗಿರಿ ಅವರು ಬುಧವಾರ ರಿಷಿಕೇಶ್ ನ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19ನಿಂದಾಗಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಶ್ರೀಮಂತ ಲಖನ್ ಗಿರಿ ಅವರು ಕಳೆದ 10 ದಿನಗಳ ಹಿಂದೆ ಏಮ್ಸ್ ಗೆ ದಾಖಲಾಗಿದ್ದು, ಕೋವಿಡ್-19 ಸೋಂಕಿಗೆ ಒಳಗಾದ ಬಳಿಕ ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದ ರು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗಿರಿ ಅವರು 20 ದಿನಗಳ ಹಿಂದೆ ಜ್ವರ ಹಾಗೂ ಕಫ ಇದೆ ಎಂಬ ಕಾರಣಕ್ಕೆ ಜಗಿತ್ ಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್-19 ಪಾಸಿಟಿವ್ ಆದ ಬಳಿಕ ರಿಷಿಕೇಶ್ ನ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಗೊಂಡಿದ್ದರು.
ಕೋವಿಡ್-19 ಕೇಸ್ ಗಳು ಭಾರತದಲ್ಲಿ ನಿರಂತರ ಏರಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 3,79,257 ಹೊಸ ಕೋವಿಡ್ ಕೇಸ್ ಗಳು ವರದಿಯಾಗಿವೆ. ಕಳೆದ ವರ್ಷ ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ಒಂದೇ ದಿನ ಏರಿಕೆಯಾಗಿರುವ ಗರಿಷ್ಠ ಪ್ರಕರಣಗಳು ಇದಾಗಿವೆ.
Next Story