ರಾಹುಲ್ ಗಾಂಧಿ ನಿಜವಾದ ಮುತ್ಸದ್ದಿಯಂತೆ ಮಾತನಾಡಿದ್ದಾರೆ: ಕಾಂಗ್ರೆಸ್ ಭಿನ್ನಮತೀಯ ನಾಯಕರ ಶ್ಲಾಘನೆ

ಹೊಸದಿಲ್ಲಿ: ಕಳೆದ ವರ್ಷ ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿ ಪತ್ರ ಬರೆದು ವಸ್ತುಶಃ ಭಿನ್ನಮತೀಯರೆಂದೇ ಗುರುತಿಸಲ್ಪಟ್ಟಿದ್ದ ಹಲವು ನಾಯಕರು ರಾಹುಲ್ ಗಾಂಧಿ ಅವರು ಕೋವಿಡ್ ಸಮಸ್ಯೆ ಹಾಗೂ ಪರಿಹಾರ ಕುರಿತಂತೆ ನೀಡುತ್ತಿರುವ ಹೇಳಿಕೆಗಳನ್ನು ಹಾಗೂ ಅವರ ದೂರದೃಷ್ಟಿಯನ್ನು ಶ್ಲಾಘಿಸಿದ್ದಾರೆ. ಈ ಕೋವಿಡ್ ಬಿಕ್ಕಟ್ಟು ರಾಹುಲ್ ಅವರ ನಾಯಕತ್ವ ಗುಣಗಳನ್ನು ಎತ್ತಿ ತೋರಿಸಿದೆ ಎಂದು ಈ ನಾಯಕರು ಹೇಳಿದ್ದಾರೆ.
ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕಪಿಲ್ ಸಿಬಲ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರು ಕೋವಿಡ್ ಕುರಿತಂತೆ ಅರ್ಥಪೂರ್ಣ ಮಾತುಗಳನ್ನು ಆಡಿದ್ದಾರೆ ಎಂದು ಹೇಳಿದ್ದಾರೆ.
"ಆತ ಒಬ್ಬ ಉತ್ತಮ ಮನುಷ್ಯ. ಇದರ ಬಗ್ಗೆ ಸಂಶಯವೇ ಬೇಡ. ಅವರಲ್ಲಿ ಋಣಾತ್ಮಕತೆಯಿಲ್ಲ. ಕೋವಿಡ್ ವಿಚಾರದಲ್ಲಿ ಅವರು ಸರಿಯಾಗಿಯೇ ಹೇಳಿದ್ದಾರೆ. ಮೋದಿ ಇದರಿಂದ ಕಲಿಯಬೇಕಿತ್ತು," ಎಂದಿದ್ದಾರೆ.
ಇನ್ನೊಬ್ಬ ಭಿನ್ನಮತೀಯ ನಾಯಕನೆಂದು ಗುರುತಿಸಲ್ಪಟ್ಟಿದ್ದ ಕರ್ನಾಟಕd ಮಾಜಿ ಸೀಎಂ ಹಾಗೂ ಮಾಜಿ ಕೇಂದ್ರ ಸಚಿವ ಎಂ ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿ. ರಾಹುಲ್ ಗಾಂಧಿ ಅವರು ಕೋವಿಡ್ ಬಿಕ್ಕಟ್ಟಿನ ಸಂದರ್ಭ "ದೂರದೃಷ್ಟಿ ಇರುವ ನಾಯಕ'ನಾಗಿ ಹೊರಹೊಮ್ಮಿದ್ದಾರೆ. ಈಗ ಎದುರಾಗಿರುವ ಹಲವು ಸಮಸ್ಯೆಗಳನ್ನು ಅವರು ಹಿಂದೆಯೇ ಊಹಿಸಿದ್ದರು. ಆಗ ಬಿಜೆಪಿ ಅವರನ್ನು ವ್ಯಂಗ್ಯವಾಡಿತ್ತು, ಅವರೆಲ್ಲಾ ಈಗ ಕ್ಷಮೆಯಾಚಿಸಬೇಕು. ರಾಹುಲ್ ಅವರು ನಿಜವಾದ ಮುತ್ಸದ್ದಿಯಂತೆ ಮಾತನಾಡಿದ್ದಾರೆ ಎಂದರು.
What @RahulGandhi said When: The situation of the country would've been very different had the Modi government listened to him in time rather than ridiculing his suggestions. pic.twitter.com/vooF852BHK
— Saral Patel (@SaralPatel) April 26, 2021