Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೊರೋನ ದುರಿತ ಕಾಲದಲ್ಲಿ ಮುಂಬೈ...

ಕೊರೋನ ದುರಿತ ಕಾಲದಲ್ಲಿ ಮುಂಬೈ ಕನ್ನಡಿಗರಿಗೊಂದು ಭರವಸೆ ಕರ್ನೂರು ಮೋಹನ್ ರೈ

ದಯಾನಂದ ಸಾಲ್ಯಾನ್ದಯಾನಂದ ಸಾಲ್ಯಾನ್30 April 2021 12:10 AM IST
share
ಕೊರೋನ ದುರಿತ ಕಾಲದಲ್ಲಿ ಮುಂಬೈ ಕನ್ನಡಿಗರಿಗೊಂದು ಭರವಸೆ ಕರ್ನೂರು ಮೋಹನ್ ರೈ

ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಮುನ್ನೂರು ರೋಗಿಗಳನ್ನು ಆಸ್ಪತ್ರೆಯ ಕೊರೋನ ವಿಭಾಗಕ್ಕೆ ಸೇರಿಸಿ ಚಿಕಿತ್ಸೆ ನೀಡುವಲ್ಲಿ ಕರ್ನೂರು ಮೋಹನ್ ರೈ ಮಹತ್ತರ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲ ರೋಗಿಗಳನ್ನು ಪ್ರತಿದಿನ ಭೇಟಿಯಾಗಿ ಅವರ ಮನೋಬಲ ಹೆಚ್ಚಿಸುವ ಪ್ರೋತ್ಸಾಹದ ನುಡಿಗಳನ್ನಾಡುತ್ತಾ ಬಂದಿದ್ದಾರೆ. ಹಾಗಾಗಿ ಕೆಲವು ಸೋಂಕಿತರು ಐದಾರು ದಿನಗಳಲ್ಲೇ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ.


ಕೊರೋನ ಎಂಬ ಬಿಕನಾಸಿ ನೆಂಟ ಆಗಮಿಸಿ ಕಳೆದ ವರ್ಷವನ್ನೆಲ್ಲ ನುಂಗಿ ಮತ್ತೆ ಅಬ್ಬರದ ದಿಗಿಣದೊಂದಿಗೆ ರಂಗಕ್ಕಿಳಿದಿದ್ದಾನೆ. ಕೊರೋನದ ನೆಪದಲ್ಲಿ ಉಳಿದ ಕಾಯಿಲೆಗಳು ಮೂಲೆಯಲ್ಲಿ ಮುದುರಿ ಕುಳಿತಿವೆ. ಈಗ ಸಂಭವಿಸುತ್ತಿರುವ ಎಲ್ಲ ಸಾವುಗಳೂ ತನ್ನಿಂದಲೇ ಎಂದು ಕೊರೋನ ಬೀಗುತ್ತಿದೆ. ಕೊರೋನದಿಂದ ಸಾಯುವುದಿಲ್ಲ ಎಂಬುದು ಕೆಲವು ತಜ್ಞರ ವಾದವಾದರೆ; ಕೊರೋನದಿಂದಲೇ ಸಾವು ಸಂಭವಿಸುತ್ತದೆ ಎಂಬುದು ಇನ್ನು ಕೆಲವರ ವಾದ. ನಿಜವಾದ ರಕ್ಷಕರು ಆಸ್ಪತ್ರೆಗಳ ಮೂಲಕ ಭಕ್ಷಕರಾಗುತ್ತಿದ್ದಾರೆ ಎಂಬ ಭಯ ಮಿಶ್ರಿತ ವಾತಾವರಣದ ನಡುವೆ ಜನರ ಬದುಕು ದುರ್ಭರವಾಗುತ್ತಿದೆ. ‘‘ಆಸ್ಪತ್ರೆಗಳ ಒಳಗೆ ಏನು ನಡೆಯುತ್ತಿದೆ; ನಾವೂ ನೋಡಬೇಕು’’ ಎಂಬ ಕೂಗು ಕೇಳಿ ಬರುವುದು ಯಾವ ದೇಶಕ್ಕೂ ಆರೋಗ್ಯಕರ ಲಕ್ಷಣವಲ್ಲ. ಆಸ್ಪತ್ರೆಯಲ್ಲಿ ವೈದ್ಯರ ಜತೆ ಜತೆಗೆ ದಾದಿಯರೂ ‘ಕಮಾಯಿ’ಯ ಹಾದಿ ಹಿಡಿದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಎಲ್ಲೆಡೆ ಅಲ್ಲದಿದ್ದರೂ ಕೆಲವೆಡೆ ಪ್ರಾಣದ ಜತೆ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಕೊರೋನ ಸೋಂಕಿತರಿರುವ ಕ್ವಾರಂಟೈನ್ ಸೆಂಟರ್‌ಗಳಿಗೆ ಊಟ-ಉಪಾಹಾರ ಪೂರೈಸುವ ಕಾಂಟ್ರಾಕ್ಟ್‌ದಾರರು ಕಳಪೆ ಮಟ್ಟದ ಆಹಾರಗಳನ್ನು ಸರಬರಾಜು ಮಾಡುವ ಆರೋಪವೂ ಕೇಳಿಬರುತ್ತದೆ.

 ಆದರೆ ಇಂತಹವೆಲ್ಲವೂ ಎಲ್ಲಾ ಕಡೆ ನಡೆಯಬೇಕಿಲ್ಲ. ಆರೋಗ್ಯವಂತ ಮನಸ್ಸನ್ನು ಹೊಂದಿರುವ ವೈದ್ಯರಿದ್ದಾರೆ, ದಾದಿಯರಿದ್ದಾರೆ. ಉತ್ತಮ ಆಹಾರಗಳನ್ನು ರೋಗಿಗಳಿಗೆ ನೀಡುವ ಕ್ಯಾಂಟೀನ್ ಗುತ್ತಿಗೆದಾರರೂ ಇದ್ದಾರೆ. ಅಂತಹವರಲ್ಲಿ ಉಲ್ಲೇಖಿಸ ಬೇಕಾದ ಒಂದು ಹೆಸರು ಕರ್ನೂರು ಮೋಹನ್ ರೈ. ಥಾಣೆಯಲ್ಲಿರುವ ಬೆಥಾಂಜ್ ಆಸ್ಪತ್ರೆಯಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಕ್ಯಾಂಟೀನ್ ಹೊಂದಿರುವ ಮೋಹನ್ ರೈ ಓರ್ವ ಹೊಟೇಲ್ ಉದ್ಯಮಿ. ಕೊರೋನ ಎಲ್ಲೆಡೆ ವ್ಯಾಪಿಸಿದ ಸಂದರ್ಭ. ಪ್ರತಿ ಆಸ್ಪತ್ರೆಯಲ್ಲೂ ಕೊರೋನ ಸೋಂಕಿತರಿಗಾಗಿ ಪ್ರತ್ಯೇಕ ಹಾಸಿಗೆ ವ್ಯವಸ್ಥೆ ಇರಬೇಕು ಎಂಬ ನಿಯಮದ ಬಳಿಕ ಈ ಆಸ್ಪತ್ರೆಯಲ್ಲೂ ಕೊರೋನ ಸೋಂಕಿತರ ಆರೈಕೆ ವಿಭಾಗ ಪ್ರಾರಂಭಗೊಂಡಿತು. ಈ ಹೊಸ ವ್ಯವಸ್ಥೆಯಿಂದ ಆ ಆಸ್ಪತ್ರೆಯ ಕ್ಯಾಂಟೀನ್ ನಡೆಸುತ್ತಿರುವ ರೈ ಕಂಗಾಲಾದರು.

ಕೊರೋನದಿಂದಾಗಿ ತನ್ನ ಕ್ಯಾಂಟೀನ್‌ನ 26 ಕಾರ್ಮಿಕರಲ್ಲಿ ಸುಮಾರು 16 ಕಾರ್ಮಿಕರು ತಮ್ಮ ಊರಿಗೆ ಪಲಾಯನಗೈದರು. ಇನ್ನುಳಿದಿದ್ದ ಹತ್ತು ಮಂದಿ ಕಾರ್ಮಿಕರಿಂದಲೇ ಮೊದಲಿನ ವ್ಯವಸ್ಥೆಯ ಜೊತೆ ಜೊತೆಗೆ, ಪಕ್ಕದ ಕಟ್ಟಡದಲ್ಲಿ ತೆರೆದ ಹೊಸ ವ್ಯವಸ್ಥೆ-ಕೋವಿಡ್ ಸೆಂಟರ್‌ನಲ್ಲಿನ ರೋಗಿಗಳಿಗೂ ಆಹಾರದ ವ್ಯವಸ್ಥೆಯಾಗಬೇಕಿತ್ತು. ತನ್ನಿಂದ ಇದನ್ನು ನಿರ್ವಹಿಸಲು ಅಸಾಧ್ಯ ಎಂದು ಹೇಳಿದರೂ ‘‘ಇಲ್ಲ, ನೀನೇ ಈ ಜವಾಬ್ದಾರಿ ನಿರ್ವಹಿಸಬೇಕು’’ ಎಂದು ಆಡಳಿತ ಮಂಡಳಿಯ ಒತ್ತಡ. ಇದು ರೈಯವರ ಹತ್ತು ವರ್ಷಗಳ ಪ್ರಾಮಾಣಿಕ ಸೇವೆಗೆ ಸಂದ ಗೌರವವೂ ಹೌದು. ಕಳೆದ ಹತ್ತು ವರ್ಷಗಳಲ್ಲಿ ಯಕ್ಷಗಾನ, ಕಾರ್ಯಕ್ರಮಗಳ ಸಂಘಟನೆ, ಊರಿನ ನಾಟಕ ತಂಡಗಳ ಆಹ್ವಾನ, ಕಾರ್ಯಕ್ರಮ ನಿರ್ವಹಣೆ ಎಂದು ತಮ್ಮ ಹೊಟೇಲ್, ಕ್ಯಾಂಟೀನ್‌ಗಳನ್ನು ದೂರದಿಂದಲೇ ನಡೆಸುತ್ತಾ ಬಂದಿರುವ ಮೋಹನ್ ರೈಯವರಿಗೆ ಈ ಹೊಸ ಜವಾಬ್ದಾರಿ ದಿಗಿಲು ಹುಟ್ಟಿಸಿದರೂ ಅದನ್ನು ಒಂದು ಪಂಥಾಹ್ವಾನವಾಗಿ ಸ್ವೀಕರಿಸಿದರು.

ಪ್ರಾರಂಭದ ಆ ದಿನಗಳಲ್ಲಿ ಭಯದ ನಡುವೆ ಮುಂಜಾನೆ 5 ಗಂಟೆಗೆ ಮಾರುಕಟ್ಟೆಗೆ ಹೋಗಿ ರೋಗಿಗಳಿಗೆ ಬೇಕಾದ ಹಣ್ಣು -ಹಂಪಲು, ತರಕಾರಿ, ದವಸ-ಧಾನ್ಯಗಳನ್ನು ತರುವ ಕಾಯಕದಿಂದ ಹೊಸ ಬದುಕು ಪ್ರಾರಂಭಗೊಂಡಿತು. ಈ ನಡುವೆ ಅವರ ಹಾಗೂ ಕಾರ್ಮಿಕರ ಆರೋಗ್ಯ ಕಾಳಜಿ ಹೆಚ್ಚಾಯಿತು. ಆ ಭಯದ ವಾತಾವರಣದಲ್ಲಿ ಎಲ್ಲವೂ ಅವರ ಮುತುವರ್ಜಿಯಲ್ಲಿ ನಡೆಯಬೇಕಿತ್ತು. ಮುಂಜಾನೆ ಉಪಾಹಾರ, ಜೊತೆಗೆ ಹಣ್ಣು -ಹಂಪಲು, ಮಧ್ಯಾಹ್ನದ ಊಟ, ಸಾಯಂಕಾಲದ ತಿಂಡಿ, ರಾತ್ರಿಯ ಊಟ ... ಹೀಗೆ ತನ್ನ ಕೆಲಸದಲ್ಲಿ ವ್ಯಸ್ತರಾಗಿದ್ದ ರೈಯವರು ಆ ಸಮಯದಲ್ಲಿ ಕಂಡುಕೊಂಡ ಮೊದಲ ಸತ್ಯವೆಂದರೆ ಕೊರೋನಕ್ಕೆ ಭಯಪಡಬಾರದೆಂಬುದು.

ಒಮ್ಮೆ ಭಯಪಟ್ಟರೆ ಕೊರೋನ ಆತನನ್ನು ಮುಕ್ಕಾಲುವಾಸಿ ಆವರಿಸಿದಂತೆ, ಆನಂತರ ವ್ಯಕ್ತಿ ಚೇತರಿಸುವುದು ಬಲು ಕಷ್ಟ ಎಂಬ ಸತ್ಯವನ್ನು ಕರ್ನೂರು ಮೋಹನ್ ರೈ ಅವರು ಕಂಡುಕೊಂಡರು. ಅಲ್ಲಿಂದ ಜಾಗೃತಗೊಂಡಿತು ರೈಯವರ ಒಳಮನಸ್ಸು. ರೈ ಅವರಿಗೆ ತಾನು ಇದುವರೆಗೆ ಹೆದರುತ್ತಿದ್ದ ಕೊರೋನ ಸೋಂಕು ಹೇಳುವಂತಹ ಮಹಾರೋಗ ಅಲ್ಲ ಎಂಬ ಅರಿವು ಮೂಡಿತು. ಮುಂದಿನ ಹೆಜ್ಜೆಯಾಗಿ ಅವರು ಕೊರೋನ ರೋಗಿಗಳನ್ನು ಭೇಟಿಯಾಗಲಾರಂಭಿಸಿದರು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾಂತ್ವನದ ನುಡಿಗಳನ್ನಾಡುತ್ತಾ ಅವರ ಆತ್ಮಬಲ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದರು. ಕಳೆದ ಒಂದು ವರ್ಷದಲ್ಲಿ ಸುಮಾರು 700ಕ್ಕಿಂತಲೂ ಹೆಚ್ಚು ಮಂದಿ ರೋಗಿಗಳನ್ನು ಮುಖತಃ ಭೇಟಿಯಾಗಿ ಅವರಿಗೆ ಭರವಸೆಯ ಮಾತುಗಳನ್ನಾಡುವುದರ ಮೂಲಕ ಧೈರ್ಯ ತುಂಬಿ ಶೀಘ್ರವೇ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳುವಂತೆ ಮಾಡಿದ್ದಾರೆ ಕರ್ನೂರು ಮೋಹನ್ ರೈ.

ತಮ್ಮ ಪರಿಚಯಸ್ಥರು, ಆಪ್ತ ಸ್ನೇಹಿತರ ಬಳಗವಲ್ಲದೆ, ಪರಿಚಯವೇ ಇರದ ಅದೆಷ್ಟೋ ಕನ್ನಡಿಗರು ‘‘ಎಲ್ಲೂ ಹಾಸಿಗೆ ಸಿಗುತ್ತಿಲ್ಲ’’ ಎಂದು ಚಿಂತೆಯಿಂದ ಕರ್ನೂರು ಮೋಹನ್ ರೈ ಅವರಿಗೆ ಫೋನಾಯಿಸಿ ಸಂಪರ್ಕಿಸಿದಾಗ ರೈ ಅವರನ್ನು ನಿರಾಶೆಗೊಳಿಸಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಮುನ್ನೂರು ರೋಗಿಗಳನ್ನು ಆಸ್ಪತ್ರೆಯ ಕೊರೋನ ವಿಭಾಗಕ್ಕೆ ಸೇರಿಸಿ ಚಿಕಿತ್ಸೆ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲ ಅವರನ್ನು ಪ್ರತಿದಿನ ಭೇಟಿಯಾಗಿ ಅವರ ಮನೋಬಲ ಹೆಚ್ಚಿಸುವ ಪ್ರೋತ್ಸಾಹದ ನುಡಿಗಳನ್ನಾಡುತ್ತಾ ಬಂದಿದ್ದಾರೆ. ಹಾಗಾಗಿ ಕೆಲವು ಸೋಂಕಿತರು ಐದಾರು ದಿನಗಳಲ್ಲೇ ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ರೋಗ ಬಂತೆಂದು ಹೆದರಿದಾಗ ನಮ್ಮಲ್ಲಿರುವ ಹಾರ್ಮೋನ್‌ಗೆ ತೊಂದರೆಯುಂಟಾಗಿ ವ್ಯಕ್ತಿಯ ರೋಗ ಮತ್ತಷ್ಟು ಉಲ್ಬಣಿಸುತ್ತದೆ ಎಂದು ವೈದ್ಯರಂತೆ ನುಡಿಯುವ ರೈಯವರು, ಎಂಬತ್ತು ವರ್ಷದ ರೋಗಿಯೋರ್ವರು ಐದೇ ದಿನಗಳಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳಿದ ಘಟನೆಯನ್ನು ವಿವರಿಸುತ್ತಾರೆ.

ಮಕ್ಕಳೆಲ್ಲ ಅಮೆರಿಕ ಮುಂತಾದೆಡೆ ಇರುವ ಕೊಂಕಣಿ ವೃದ್ಧ ದಂಪತಿಯೊಂದರ ಪಾಲಿಗೆ ಮಗನಂತೆ ಇದ್ದು, ಅವರಿಗೆ ಸಾಂತ್ವನ ಹೇಳಿ ಅವರು ಶೀಘ್ರ ಗುಣಮುಖರಾಗಲು ರೈ ನೆರವಾಗಿದ್ದಾರೆ. ತನಗೆ ಪರಿಚಯವೇ ಇಲ್ಲದಿದ್ದ ಆ ವೃದ್ಧ ದಂಪತಿ ಕನ್ನಡಿಗರೆಂದು ತಿಳಿದಾಗ ಸ್ವಾಭಾವಿಕ ಕಾಳಜಿಯಿಂದ ಅವರನ್ನು ಆರೈಕೆ ಮಾಡಿದ್ದಾರೆ. ಅವರು ಗುಣಮುಖರಾಗಿ ನಗುನಗುತ್ತಾ ಮೋಹನ್ ರೈ ಅವರನ್ನು ಹರಸಿ ಹೋದದ್ದು ಅವರಿಗೆ ಪ್ರಶಸ್ತಿ ಪುರಸ್ಕಾರ ಸಿಕ್ಕಷ್ಟು ಖುಷಿ ತಂದುಕೊಟ್ಟಿದೆ. ರೋಗಿಗಳ ಜೊತೆ ಮಾತುಕತೆ ಮಾತ್ರವಲ್ಲದೆ, ಅವಶ್ಯ ಬಿದ್ದರೆ ರಕ್ತ, ಪ್ಲಾಸ್ಮಾ, ಆ್ಯಂಬುಲೆನ್ಸ್, ಔಷಧಿ ಹೀಗೆ ರೋಗಿಗಳ ನೆರವಿಗೆ ಸದಾ ಸಿದ್ಧರಾಗಿದ್ದಾರೆ ಮೋಹನ್ ರೈ.

ಖ್ಯಾತ ಯಕ್ಷಗಾನ ಕಲಾವಿದ, ಸ್ವಂತ ಮೇಳವನ್ನು ಹೊಂದಿದ್ದ ಕೊರಗಪ್ಪರೈಯವರ ಮಗ ಮೋಹನ್ ರೈ. ಯಕ್ಷಗಾನದಲ್ಲಿ ಗೆಜ್ಜೆ ಕಟ್ಟಿರುವ ಮೋಹನ್ ರೈ ಓರ್ವ ರಂಗಕಲಾವಿದನೂ ಹೌದು. ಊರಿನ ನಾಟಕ ತಂಡಗಳನ್ನು ಮುಂಬೈಗೆ ಕರೆಸಿ ಇಲ್ಲಿ ನಾಟಕಗಳ ಪ್ರಯೋಗ ಕಾಣುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಗಲ್ಫ್ ರಾಷ್ಟ್ರಗಳಿಗೆ ಮಂಗಳೂರಿನ ತುಳು ನಾಟಕ ತಂಡಗಳು ಹೋಗುವುದಕ್ಕೆ, ಅಲ್ಲಿ ಪ್ರಥಮವಾಗಿ ನಾಟಕಗಳು ಪ್ರಯೋಗ ಕಾಣಲು ಕಾರಣಕರ್ತರು ಹಾಗೂ ಪ್ರೇರಣಾಶಕ್ತಿ ಮೋಹನ್ ರೈ. ಇಲ್ಲಿನ ಗೀತಾಂಬಿಕಾ ಯಕ್ಷಗಾನ ಮಂಡಳಿಯ ಅಧ್ಯಕ್ಷನಾಗಿ, ಥಾಣೆ ಬಂಟ್ಸ್ ಇದರ ‘ಸ್ನೇಹ ಸೌರಭ’ದ ಕಾರ್ಯಾಧ್ಯಕ್ಷನಾಗಿ, ಪ್ರತಿಷ್ಠಿತ ಬಂಟರ ಸಂಘದ ಸಾಹಿತ್ಯ-ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷನಾಗಿಯೂ ಸೇವೆ ನಿರತನಾಗಿರುವ ಮೋಹನ್ ರೈ, ಸಾವಿರಾರು ಕಾರ್ಯಕ್ರಮಗಳ ನಿರೂಪಕರಾಗಿಯೂ ಜನಮನ್ನಣೆ ಪಡೆದಿದ್ದಾರೆ. ಮುಂಬೈ ನಗರ-ಉಪನಗರಗಳಲ್ಲಿ ಊರಿನ ತಂಡಗಳಿಂದ ಈವರೆಗೆ ಸುಮಾರು ದಾಖಲೆಯ ಸಾವಿರದ ಐನೂರಕ್ಕಿಂತಲೂ ಹೆಚ್ಚು ರಂಗಪ್ರಯೋಗಗಳು ನಡೆಯುವುದಕ್ಕೆ ಕಾರಣರಾಗಿದ್ದಾರೆ. ಆದರೆ ಇವೆಲ್ಲವುಗಳಿಗಿಂತಲೂ ತನಗೆ ನೆಮ್ಮದಿ ಖುಷಿ ಕೊಟ್ಟ ಕೈಂಕರ್ಯ ಕೊರೋನ ಕಾಲದ್ದು; ನಿಜವಾದ ಸಮಾಜಸೇವೆ ಎಂದರೆ ಏನೆಂದು ತನಗೆ ಈಗ ಅರ್ಥ ಆಯಿತು ಎನ್ನುವ ಮೋಹನ್ ರೈ ಕನ್ನಡಿಗರೆನ್ನಲು ಅಭಿಮಾನ.

ಆ ಕೊರೋನ ಆಸ್ಪತ್ರೆಯಲ್ಲಿರುವುದು ಕೇವಲ ಐವತ್ತು ಹಾಸಿಗೆಗಳು. ಅಲ್ಲಿ ಪ್ರತಿದಿನ ಕೇವಲ ಐದಾರು ಮಂದಿ ಗುಣಮುಖರಾಗಿ ಮನೆಗೆ ಹೋಗುತ್ತಾರೆ. ಆ ಐದಾರು ಹಾಸಿಗೆಗಳಿಗಾಗಿ ರಾಜಕಾರಣಿಗಳು, ಸ್ಥಳೀಯ ಗಣ್ಯವ್ಯಕ್ತಿಗಳು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿ...ಹೀಗೆ ಎಲ್ಲಾ ಕಡೆಗಳಿಂದಲೂ ಬೇಡಿಕೆ ಇರುತ್ತದೆ. ಆದರೆ ಕರ್ನೂರು ಮೋಹನ್ ರೈ ಅವರನ್ನು ಯಾರೇ ಕನ್ನಡಿಗರು ಸಂಪರ್ಕಿಸಲಿ; ಅವರ ಅಳಲನ್ನು ತೋಡಿಕೊಳ್ಳಲಿ ಮೋಹನ್ ರೈ ಕೂಡಲೇ ಕಾರ್ಯಪ್ರವೃತ್ತರಾಗಿ ಅವರಿಗೆ ಸಹಾಯ ಹಸ್ತ ನೀಡುತ್ತಾರೆ.

ಹೀಗೆ ಕೊರೋನವು ತನ್ನ ಚಿಂತನೆಯನ್ನೇ, ತನ್ನ ಬದುಕಿನ ಧ್ಯೇಯವನ್ನೇ ಬದಲು ಮಾಡಿತು ಎನ್ನುತ್ತಾರೆ ಮೋಹನ್ ರೈ. ಮೋಹನ್ ರೈ ಅವರಂತಹ ಹತ್ತು ಹಲವು ಜೀವಗಳು ಇತರರಿಗಾಗಿ ಮಿಡಿಯುವ ಕಥೆ ಈ ನಗರದುದ್ದಕ್ಕೂ ಹರಡಿಕೊಂಡಿದೆ. ಅಂತಹ ಕನ್ನಡಿಗರಿಗೆ ಹೃದಯತುಂಬಿದ ನಮನಗಳು.

share
ದಯಾನಂದ ಸಾಲ್ಯಾನ್
ದಯಾನಂದ ಸಾಲ್ಯಾನ್
Next Story
X