ಜರ್ಮನಿ: ಕ್ಲಿನಿಕ್ನಲ್ಲಿ ಹಿಂಸಾಚಾರ; ನಾಲ್ವರು ಸಾವು
ಬರ್ಲಿನ್ (ಜರ್ಮನಿ), ಎ. 29: ಜರ್ಮನಿಯ ಪೋಶ್ಡಾಮ್ ನಗರದ ಚಿಕಿತ್ಸಾಲಯವೊಂದರಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತರಿಗೆ ಅಪಾರ ಹಿಂಸೆಯನ್ನು ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಘಟನೆಯ ವಿವರಗಳನ್ನು ಅವರು ನೀಡಿಲ್ಲ.
ದಾಳಿಯನ್ನು ನಡೆಸಿದ ಬಲವಾದ ಸಂಶಯದ ಮೇರೆಗೆ 51 ವರ್ಷದ ಓರ್ವ ಉದ್ಯೋಗಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಮೃತಪಟ್ಟವರು ಚಿಕಿತ್ಸಾಲಯಕ್ಕೆ ಬಂದಿದ್ದ ರೋಗಿಗಳು ಎನ್ನಲಾಗಿದೆ.
Next Story