ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಕೋವಿಡ್ ನಿಂದ ನಿಧನ

ಹೊಸದಿಲ್ಲಿ: ಭಾರತದ ಮಾಜಿ ಅಟಾರ್ನಿ ಜನರಲ್ ಹಾಗೂ ಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ಶುಕ್ರವಾರ ಬೆಳಗ್ಗೆ ಕೋವಿಡ್ ಸೋಂಕಿನಿಂದಾಗಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಪದ್ಮವಿಭೂಷಣ ಪ್ರಶಸ್ತಿ ವಿಜೇತ ಸೊರಾಬ್ಜಿ ಅವರಿಗೆ ಕೊರೋನ ವೈರಸ್ ಸೋಂಕು ತಗಲಿದ ಬಳಿಕ ದಕ್ಷಿಣ ದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಕುಟುಂಬ ಮೂಲಗಳು ತಿಳಿಸಿವೆ.
ಸೋಲಿ ಜೆಹಂಗೀರ್ ಸೊರಾಬ್ಜಿ 1930ರಲ್ಲಿ ಮುಂಬೈನಲ್ಲಿ ಜನಿಸಿದರು. ಅವರು 1953ರಲ್ಲಿ ಬಾಂಬೆ ಹೈಕೋರ್ಟ್‍ನೊಂದಿಗೆ ಕಾನೂನು ಅಭ್ಯಾಸ ಆರಂಭಿಸಿದರು. 1971ರಲ್ಲಿ ಅವರನ್ನು ಸುಪ್ರೀಂಕೋರ್ಟ್‍ನ ಹಿರಿಯ ವಕೀಲರನ್ನಾಗಿ ನೇಮಿಸಲಾಗಿತ್ತು.
ಸೊರಾಬ್ಜಿ ಅವರು ಮೊದಲಿಗೆ 1989ರಲ್ಲಿ ಅಟಾರ್ನಿ ಜನರಲ್ ಆದರು. ನಂತರ 1998ರಿಂದ 2004ರ ತನಕ ಅಟಾರ್ನಿ ಜನರಲ್ ಆಗಿದ್ದರು.
Next Story





