ನಾಳೆ ಲಸಿಕೆಗಾಗಿ ಕ್ಯೂ ನಿಲ್ಲಬೇಡಿ: ದಿಲ್ಲಿ ನಾಗರಿಕರಿಗೆ ಅರವಿಂದ ಕೇಜ್ರಿವಾಲ್ ಮನವಿ

ಹೊಸದಿಲ್ಲಿ: ನಗರಕ್ಕೆ ಇನ್ನೂ ಲಸಿಕೆ ಸರಬರಾಜು ಬಂದಿಲ್ಲವಾದ್ದರಿಂದ ಕೋವಿಡ್ ಲಸಿಕೆಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಡಿ ಎಂದು ದಿಲ್ಲಿ ನಾಗರಿಕರಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿನಂತಿಸಿಕೊಂಡರು.
18 ವರ್ಷಕ್ಕಿಂತ ಮೇಲ್ಮಟ್ಟ ಎಲ್ಲರಿಗೂ ಲಸಿಕೆಗಳನ್ನು ಆರಂಭಿಸುವ ಮುನ್ನಾದಿನ ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಇಂತಹದ್ದೊಂದು ಮನವಿ ಮಾಡಿದ್ದಾರೆ.
ನಾಳೆ ಲಸಿಕೆಗಳಿಗಾಗಿ ಕ್ಯೂ ನಿಲ್ಲಬೇಡಿ. ಲಸಿಕೆಗಳು ಬಂದ ಕೂಡಲೇ ನಾವು ನಿಮಗೆ ತಿಳಿಸುತ್ತೇವೆ. ನಂತರ ನೀವು ಲಸಿಕೆ ಸ್ವೀಕರಿಸಲು ಬರಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಮೇ 1ರಂದು ವ್ಯಾಕ್ಸಿನೇಶನ್ ಗಳನ್ನು 18 ವರ್ಷದಿಂದ 44 ವರ್ಷದ ತನಕ ವಿಸ್ತರಿಸಲಾಗುವುದು ಎಂದು ಕೇಂದ್ರ ಸರಕಾರ ಇತ್ತೀಚೆಗೆ ಘೋಷಿಸಿತ್ತು. ಆದರೆ ಹಲವಾರು ರಾಜ್ಯಗಳು ಲಸಿಕೆ ದಾಸ್ತಾನು ಇಲ್ಲದ ಕಾರಣ ಮೇ 1ರಂದು ಶನಿವಾರ ಲಸಿಕೆ ಅಭಿಯಾನ ಆರಂಭಿಸಲು ಸಾಧ್ಯವಿಲ್ಲ ಎಂದು ಹೇಳಿವೆ.
Next Story