ಹುಲಿ ದಾಳಿಗೆ ಹಸು ಬಲಿ: ಸೋಮವಾರಪೇಟೆ ತಾಲೂಕಿನ ಅರೆಯೂರು ಗ್ರಾಮದಲ್ಲಿ ಆತಂಕ

ಸಾಂದರ್ಭಿಕ ಚಿತ್ರ
ಮಡಿಕೇರಿ, ಎ.30: ದಕ್ಷಿಣ ಕೊಡಗು ಭಾಗದಲ್ಲಿ ವ್ಯಾಪಕವಾಗಿದ್ದ ಹುಲಿ ಉಪಟಳ ಈಗ ಉತ್ತರ ಕೊಡಗಿಗೂ ವ್ಯಾಪಿಸಿದೆ. ಹುಲಿ ದಾಳಿಯಿಂದ ಹಸುವೊಂದು ಬಲಿಯಾದ ಘಟನೆ ಸೋಮವಾರಪೇಟೆ ತಾಲೂಕಿನ ಅರೆಯೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಕುಟ್ಟಪ್ಪ ಎಂಬವರಿಗೆ ಸೇರಿದ ಹಸುವನ್ನು ಇಂದು ಬೆಳಗ್ಗಿನ ಜಾವ ಎಳೆದೊಯ್ದ ಹುಲಿ ದೇಹದ ಅರ್ಧಭಾಗವನ್ನು ಭಕ್ಷಿಸಿದೆ. ಹಸುವಿನ ಮೌಲ್ಯ 30 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಹುಲಿ ಪ್ರತ್ಯಕ್ಷವಾಗಿರುವುದರಿಂದ ಗ್ರಾಮದಲ್ಲಿ ಆತಂಕ ಮೂಡಿದೆ.
Next Story





