'ಮಿಷನ್ ಆಕ್ಸಿಜನ್'ಗೆ 1 ಕೋಟಿ ರೂ. ದೇಣಿಗೆ ನೀಡಿದ ಸಚಿನ್ ತೆಂಡುಲ್ಕರ್

ಮುಂಬೈ: ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಆಮದು ಮಾಡಿ ಅವುಗಳನ್ನು ದೇಶದ ವಿವಿಧೆಡೆಗಳ ಆಸ್ಪತ್ರೆಗಳಿಗೆ ದೇಣಿಗೆ ನೀಡುವ ಮಿಷನ್ ಆಕ್ಸಿಜನ್‍ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಸಚಿನ್ ತೆಂಡುಲ್ಕರ್ ಅವರು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಈ ಕುರಿತು ತೆಂಡುಲ್ಕರ್ ಅವರು ಟ್ವೀಟ್ ಮಾಡಿ ನಾಗರಿಕರು ಕೋವಿಡ್ 2ನೇ ಅಲೆ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು ಎಂದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೋವಿಡ್‍ನಿಂದ ಚೇತರಿಸಿಕೊಂಡಿರುವ ತೆಂಡುಲ್ಕರ್ ಅವರು ಸಾಧ್ಯವಾದಾಗ ತಾವು ಪ್ಲಾಸ್ಮಾ ದಾನ ಮಾಡುವುದಾಗಿ ಹೇಳಿದ್ದರು. "ಈ ಕುರಿತು ವೈದ್ಯರ ಜತೆ ಮಾತನಾಡಿದ್ದೇನೆ. ಕೋವಿಡ್‍ನಿಂದ ಗುಣಮುಖರಾದವರು ಕೂಡ ವೈದ್ಯರ ಜತೆ ಮಾತನಾಡಿ ಸೂಕ್ತ ಸಮಯದಲ್ಲಿ ಪ್ಲಾಸ್ಮಾ ದಾನ ಮಾಡಬೇಕು" ಎಂದು ತೆಂಡುಲ್ಕರ್ ಈ ಹಿಂದೆ ಹೇಳಿದ್ದರು.
ಕಳೆದ ವರ್ಷ ತೆಂಡುಲ್ಕರ್ ಅವರು ಪ್ಲಾಸ್ಮಾ ದೇಣಿಗೆ ಕೇಂದ್ರವೊಂದನ್ನೂ ಉದ್ಘಾಟಿಸಿದ್ದರು.
— Sachin Tendulkar (@sachin_rt) April 29, 2021
Next Story