ಪೈಪ್‌ಲೈನ್ ಕಾಮಗಾರಿ; ವಾಹನ ಸಂಚಾರ ಸ್ಥಗಿತ
ಉಡುಪಿ, ಎ.30: ಸೌಕೂರು ಏತ ನೀರಾವರಿ ಕಾಮಗಾರಿಯಲ್ಲಿ ಪೈಪ್‌ಲೈನ್ ಅಳವಡಿಸುವ ಕಾಮಗಾರಿಯನ್ನು ಕೈಗೊಳ್ಳಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿ 1989 ರ ಕಲಂ 221(ಎ)(2)(5) ರನ್ವಯ ಕುಂದಾಪುರ ತಾಲೂಕಿನ ಮಾವಿನಕಟ್ಟೆ ಸರ್ಕಲ್ ನಿಂದ ನೇರಳಕಟ್ಟೆ ಸರ್ಕಲ್‌ವರೆಗೆ ಮೇ 1ರಿಂದ ಮೇ 11 ರವರೆಗೆ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ, ಪರ್ಯಾಯ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ.
ವಾಹನಗಳ ಪರ್ಯಾಯ ಮಾರ್ಗ: ಅಂಪಾರು- ನೇರಳಕಟ್ಟೆ- ನೆಂಪು- ಹೆಮ್ಮಾಡಿ ಮಾರ್ಗವಾಗಿ ಹಾಗೂ ಕಂಡ್ಲೂರು- ಗುಲ್ವಾಡಿ- ಮಾವಿನಕಟ್ಟೆ- ಹಟ್ಟಿಯಂಗಡಿ- ತಲ್ಲೂರು- ಹೆಮ್ಮಾಡಿ ಮಾರ್ಗವಾಗಿ ತಲುಪುವಂತೆ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





