ಇಬ್ಬರು ನಿವೃತ್ತ ಅಧಿಕಾರಿಗಳ ನಿಧನ: ಅರಣ್ಯ ಇಲಾಖೆ ಸಂತಾಪ
ಬೆಂಗಳೂರು, ಎ.30: ಅರಣ್ಯ ಇಲಾಖೆಯ ನಿವೃತ್ತ ಅರಣ್ಯಾಧಿಕಾರಿ ಜಾವೇದ್ ಮುಮ್ತಾಜ್ ಹಾಗೂ ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಶ್ಯಾಮಸುಂದರ್ ಅವರ ನಿಧನಕ್ಕೆ ರಾಜ್ಯ ಅರಣ್ಯ ಇಲಾಖೆ ಸಂತಾಪ ಸೂಚಿಸಿದೆ.
ಜಾವೇದ್ ಮುಮ್ತಾಜ್ ಅವರು ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‍ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರೆ, ಎಸ್.ಶ್ಯಾಮಸುಂದರ್ ಅವರು ಅರಣ್ಯ ಇಲಾಖೆಯ ಅನುಭವಿ ಹಿರಿಯ ಅಧಿಕಾರಿಯಾಗಿ ನಿವೃತ್ತಿ ಹೊಂದಿದ್ದರು.
ಈ ಇಬ್ಬರು ಅಧಿಕಾರಿಗಳ ಅಗಲಿಕೆಗೆ ಅರಣ್ಯ ಇಲಾಖೆ ಸಂತಾಪ ಸೂಚಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದೆ.
Next Story





