ಬ್ರೆಝಿಲ್: 4 ಲಕ್ಷ ದಾಟಿದ ಕೊರೋನ ಸಾವಿನ ಸಂಖ್ಯೆ

ಬ್ರೆಸೀಲಿಯ (ಬ್ರೆಝಿಲ್), ಎ. 30: ಬ್ರೆಝಿಲ್ನಲ್ಲಿ ಕೊರೋನ ವೈರಸ್ ನಿಂದಾಗಿ ಮೃತಪಟ್ಟವರ ಸಂಖ್ಯೆ ಗುರುವಾರ 4 ಲಕ್ಷವನ್ನು ದಾಟಿದೆ.
ಈ ನಡುವೆ, ಲಸಿಕಾ ಕಾರ್ಯಕ್ರಮದಲ್ಲಿ ಬಳಸುವುದಕ್ಕಾಗಿ ಸಾಕಷ್ಟು ಲಸಿಕೆಗಳನ್ನು ಪಡೆಯಲು ಬ್ರೆಝಿಲ್ ಪರದಾಡುತ್ತಿದೆ. ಅದೂ ಅಲ್ಲದೆ, ಅಧ್ಯಕ್ಷ ಜೈರ್ ಬೊಲ್ಸೊನಾರೊರಿಂದಾಗಿ ಕೊರೋನ ವೈರಸ್ ಉಲ್ಬಣಿಸಿತೇ ಎಂಬ ಬಗ್ಗೆ ದೇಶದ ಸೆನೆಟ್ ತನಿಖೆ ಆರಂಭಿಸಿದೆ.
ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,001 ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ಗುರುವಾರ ವರದಿ ಮಾಡಿದೆ.ಇದರೊಂದಿಗೆ ದೇಶದ ಒಟ್ಟು ಕೊರೋನ ಸಾವಿನ ಸಂಖ್ಯೆ 4,01,186ಕ್ಕೆ ಏರಿದೆ. ಸಾವಿನ ಸಂಖ್ಯೆಯಲ್ಲಿ ಬ್ರೆಝಿಲ್, ಅಮೆರಿಕದ ಬಳಿಕ 2ನೇ ಸ್ಥಾನದಲ್ಲಿದೆ.
21.2 ಕೋಟಿ ಜನಸಂಖ್ಯೆ ಹೊಂದಿರುವ ದಕ್ಷಿಣ ಅಮೆರಿಕದ ಬೃಹತ್ ರಾಷ್ಟ್ರ ಬ್ರೆಝಿಲ್ ಅತ್ಯಧಿಕ ಸಾವಿನ ದರವನ್ನು ಹೊಂದಿರುವ ದೇಶಗಳ ಪೈಕಿ ಒಂದಾಗಿದೆ. ಅಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 189 ಮಂದಿ ಕೊರೋನ ವೈರಸ್ ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
Next Story





