12ರಿಂದ 15 ವರ್ಷದವರಿಗೆ ಲಸಿಕೆ: ಯುರೋಪ್ ನ ಅನುಮೋದನೆ ಕೋರಿದ ಫೈಝರ್-ಬಯೋಎನ್ ಟೆಕ್

ಫ್ರಾಂಕ್ಫರ್ಟ್ (ಜರ್ಮನಿ), ಎ. 30: 12ರಿಂದ 15 ವರ್ಷದವರೆಗಿನವರಿಗಾಗಿ ಸಿದ್ಧಪಡಿಸಲಾಗಿರುವ ತಮ್ಮ ಕೋವಿಡ್-19 ಲಸಿಕೆಗೆ ಅನುಮೋದನೆ ನೀಡುವಂತೆ ಯುರೋಪಿಯನ್ ಆರೋಗ್ಯ ನಿಯಂತ್ರಣ ಸಂಸ್ಥೆಗಳಿಗೆ ಮನವಿ ಮಾಡಿರುವುದಾಗಿ ಫೈಝರ್-ಬಯೋಎನ್ ಟೆಕ್ ಶುಕ್ರವಾರ ಹೇಳಿವೆ.
ಈ ಕಂಪೆನಿಗಳು ಈ ತಿಂಗಳ ಆರಂಭದಲ್ಲಿ ಇದೇ ಮನವಿಯನ್ನು ಅಮೆರಿಕ ಸರಕಾರಕ್ಕೂ ಮಾಡಿವೆ.
ತಮ್ಮ ಲಸಿಕೆಗೆ ಈಗ ನೀಡಿರುವ ತುರ್ತು ಅನುಮೋದನೆಯನ್ನು 12ರಿಂದ 15 ವರ್ಷದವರೆಗಿನವರನ್ನೂ ಸೇರಿಸಿಕೊಳ್ಳಲು ವಿಸ್ತರಿಸುವಂತೆ ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ (ಇಎಮ್ಎ)ಗೆ ಕಂಪೆನಿಗಳು ಮನವಿ ಸಲ್ಲಿಸಿವೆ ಎಂದು ಹೇಳಿಕೆಯೊಂದರಲ್ಲಿ ಕಂಪೆನಿಗಳು ಹೇಳಿವೆ.
ಈ ವಯೋಗುಂಪಿನವರಿಗೆ ಜೂನ್ ತಿಂಗಳಿಂದ ಲಸಿಕೆ ಸಿಗಬಹುದು ಎಂದು ಬಯೋಎನ್ಟೆಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಗುರ್ ಸಾಹಿನ್ ಗುರುವಾರ ಹೇಳಿದ್ದಾರೆ.
Next Story





