ಆಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ: ವೈದ್ಯ ಸೇರಿ 8 ಮಂದಿ ಮೃತ್ಯು

ಹೊಸದಿಲ್ಲಿ: ದಿಲ್ಲಿಯ ಬಾತ್ರಾ ಆಸ್ಪತ್ರೆಯಲ್ಲಿ ಶನಿವಾರ ಮಧ್ಯಾಹ್ನ 12:45ರ ಸುಮಾರಿಗೆ ಆಕ್ಸಿಜನ್ ಪೂರೈಕೆಯಲ್ಲಿ ಆದ ವ್ಯತ್ಯಯದಿಂದಾಗಿ ಓರ್ವ ವೈದ್ಯ ಸೇರಿದಂತೆ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಒಂದು ವಾರದ ಅವಧಿಯಲ್ಲಿ ಎರಡನೇ ಬಾರಿ ಈ ಘಟನೆ ನಡೆದಿದೆ.
ಮರು-ಸರಬರಾಜು ಟ್ಯಾಂಕರ್ ಗಳು ಮಧ್ಯಾಹ್ನ 1:30ರ ಸುಮಾರಿಗೆ ಆಸ್ಪತ್ರೆಗೆ ತಲುಪಿದ್ದು, ಸುಮಾರು 230 ರೋಗಿಗಳು ಸುಮಾರು 80 ನಿಮಿಷಗಳ ಕಾಲ ಆಮ್ಲಜನಕ ವಿಲ್ಲದೆ ಕಳೆಯುವಂತಾಯಿತು ಎಂದು ರಾಷ್ಟ್ರ ರಾಜಧಾನಿಯಲ್ಲಿನ ಆಕ್ಸಿಜನ್ ಬಿಕ್ಕಟ್ಟಿನ ಕುರಿತು ಮ್ಯಾರಥಾನ್ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್‍ಗೆ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಮಗೆ ಮಧ್ಯಾಹ್ನ 12:45ಕ್ಕೆ ಆಕ್ಸಿಜನ್ ಸರಬರಾಜಿನಲ್ಲಿ ವ್ಯತ್ಯಯವಾಯಿತು. 1:30ಕ್ಕೆ ಸರಬರಾಜು ಪುನರಾರಂಭವಾಯಿತು. ಒಂದು ಗಂಟೆ, 20 ನಿಮಿಷಗಳ ಕಾಲ ಆಕ್ಸಿಜನ್ ಇಲ್ಲದೆ ಕಳೆದಿದ್ದೆವು ಎಂದು ಆಸ್ಪತ್ರೆ ಅಧಿಕಾರಿಗಳು ಹೈಕೋರ್ಟ್‍ಗೆ ತಿಳಿಸಿದೆ.
Next Story