ದಿಲ್ಲಿಯಲ್ಲಿರುವ ಆಸ್ಪತ್ರೆಗಳಿಗೆ ಏನಾದರೂ ಮಾಡಿ ಆಮ್ಲಜನಕ ಪೂರೈಸಿ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ಆದೇಶ
ನೀರು ನಮ್ಮ ತಲೆಯ ಮೇಲೆ ಬಂದಾಗಿದೆ ಎಂದ ನ್ಯಾಯಾಲಯ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿರುವ ಆಸ್ಪತ್ರೆಗಳಿಗೆ ಯಾವುದೇ ವಿಧಾನದಿಂದಲಾದರೂ ವೈದ್ಯಕೀಯ ಆಮ್ಲಜನಕವನ್ನು ನೀಡಬೇಕು ಎಂದು ದಿಲ್ಲಿ ಹೈಕೋರ್ಟ್ ಶನಿವಾರ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ನಿಭಾಯಿಸುವ ಕುರಿತು ಆರೋಗ್ಯ ಮೂಲ ಸೌಕರ್ಯ ಹೇಗೆ ನಿಭಾಯಿಸುತ್ತಿವೆ ಎಂಬ ಅರ್ಜಿಗಳನ್ನು ದಿಲ್ಲಿ ಹೈಕೋರ್ಟ್ ಇಂದು ಆಲಿಸಿದ ಬಳಿಕ ಕೇಂದ್ರಕ್ಕೆ ನ್ಯಾಯಾಲಯ ಒತ್ತಾಯಿಸಿದೆ.
ನೀರು ನಮ್ಮ ತಲೆಗಿಂತ ಮೇಲೆ ಹೋಗಿದೆ. ನೀವು ಈಗ ಎಲ್ಲವನ್ನೂ ವ್ಯವಸ್ಥೆ ಮಾಡಬೇಕು. ನೀವು ಹಂಚಿಕೆ ಮಾಡಿದ್ದೀರಿ. ನೀವು ಅದನ್ನು ಪೂರೈಸಬೇಕು. ಎಂಟು ಜೀವಗಳು ಇಂದು ಕಳೆದುಹೋಗಿವೆ. ಅದನ್ನು ನೋಡಿ ನಾವು ಕಣ್ಣು ಮುಚ್ಚಿಕೊಂಡಿರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.
Next Story