ಮೇ 2ರಂದು ಎಸ್ಸೆಸ್ಸೆಫ್ ನಿಂದ ಪ್ರಾರ್ಥನಾ ಸಂಗಮ

ಮಂಗಳೂರು : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಪ್ರಾರ್ಥನಾ ಸಂಗಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಅಧ್ಯಕ್ಷತೆಯಲ್ಲಿ ಮೇ 2 (ರಂಝಾನ್ 21ನೇ ರಾತ್ರಿ) ರಾತ್ರಿ 9:30 ಗಂಟೆಗೆ ಝೂಮಿನಲ್ಲಿ (Zoom) ನಡೆಯಲಿರುವುದು.
ಶೈಖುನಾ ಮಹ್ಮೂದ್ ಉಸ್ತಾದ್ ಎಡಪ್ಪಾಲ ದುಆ: ನೇರವೇರಿಸಲಿರುವರು. ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್ ಪ್ರಾರ್ಥನಾ ಸಂಗಮವನ್ನು ಉದ್ಘಾಟಿಸಲಿರುವರು. ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಲಿರುವರು.
ಡಾ ಫಾರೂಕ್ ನಈಮಿ ಅಲ್ ಬುಖಾರಿ ಕೊಲ್ಲಂ , ಡಾ ಮುಹಮ್ಮದ್ ಪಾಝಿಲ್ ರಝ್ವಿ ಹಝ್ರತ್ ಕಾವಲ್ಕಟ್ಟೆ ಸಂದೇಶ ಭಾಷಣ ಮಾಡಲಿರುವರು. ಐ ಎನ್ ಸಿ ಅಧ್ಯಕ್ಷ ಡಾ ಶೇಖ್ ಬಾವ ಹಾಜಿ , ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಹಾಮಿದ್ ಗೂಡಿನಬಳಿ ಶುಭ ಸಂದೇಶ ನೀಡಲಿರುವರು. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ ಕಡಲುಂಡಿ ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಲಿರುವರು.
ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಉಸ್ಮಾನ್ ಸಅದಿ ಪಟ್ಟೋರಿ, ಡಾ ಝೈನಿ ಕಾಮಿಲ್ ಸಖಾಫಿ, ಮೌಲಾನಾ ಶಾಫಿ ಸಅದಿ ಬೆಂಗಳೂರು, ಪಿಪಿ ಅಹ್ಮದ್ ಸಖಾಫಿ ಕಾಶಿಪಟ್ಣ, ಜಿ.ಎಮ್ ಮುಹಮ್ಮದ್ ಕಾಮಿಲ್ ಸಖಾಫಿ ,ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ, ಕೆ.ಕೆ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ, ಅಬ್ದುರ್ರಹ್ಮಾನ್ ಮದನಿ ಜೆಪ್ಪು ಹಾಗೂ ಎಸ್.ವೈ.ಎಸ್, ಎಸ್ಸೆಸ್ಸೆಫ್, ಕೆ.ಸಿ.ಎಫ್ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







