ಮಾಜಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಕೋವಿಡ್ಗೆ ಬಲಿ

ಮುಹಮ್ಮದ್ ಶಹಾಬುದ್ದೀನ್ (File Photo/indiatoday.in)
ಹೊಸದಿಲ್ಲಿ: ಕೋವಿಡ್ ಸೋಂಕಿಗೊಳಗಾಗಿದ್ದ ಮಾಜಿ ಆರ್ಜೆಡಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಅವರು ದಿಲ್ಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು.
ಆರಂಭದಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ಶಹಾಬುದ್ದೀನ್ ಅವರ ನಿಧನ ಕುರಿತಾದ ವರದಿಗಳನ್ನು ನಿರಾಕರಿಸಿದ್ದರಲ್ಲದೆ ಅವರಿನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿದ್ದರು. ಆದರೆ ಆಸ್ಪತ್ರೆ ನಂತರ ಅವರ ಸಾವಿನ ಸುದ್ದಿಯನ್ನು ದೃಢಪಡಿಸಿದೆ. ಅವರನ್ನು ಇತ್ತೀಚೆಗೆ ಆಸ್ಪತ್ರೆಯ ಐಸಿಯುವಿಗೆ ದಾಖಲಿಸಲಾಗಿತ್ತು.
ಕೊಲೆ ಪ್ರಕರಣವೊಂದರಲ್ಲಿ ಅವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.
Next Story





