ದಿಲ್ಲಿ: ಇನ್ನೂ ಒಂದು ವಾರ ಲಾಕ್ ಡೌನ್ ವಿಸ್ತರಣೆ

ಹೊಸದಿಲ್ಲಿ: ದಿಲ್ಲಿಯ ಲಾಕ್ ಡೌನ್ ಸೋಮವಾರ ಸಂಜೆ 5 ಗಂಟೆಗೆ ಕೊನೆಯಾಗಲಿದ್ದು, ಲಾಕ್ ಡೌನ್ ಇನ್ನೂ ಒಂದು ವಾರ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಸಂಜೆ ತಿಳಿಸಿದ್ದಾರೆ.
ಹೊಸ ಕೊರೋನ ವೈರಸ್ ಕೇಸ್ ಗಳಿಗೆ ನಿಯಂತ್ರಣ ವಿಧಿಸಲು ರಾಷ್ಟ್ರ ರಾಜಧಾನಿಯಲ್ಲಿ ಎಪ್ರಿಲ್ 19ರಿಂದ ಲಾಕ್ ಡೌನ್ ಪ್ರಕಟಿಸಲಾಗಿದೆ. ದಿಲ್ಲಿಯಲ್ಲಿ ಈಗಲೂ ಪಾಸಿಟಿವಿಟಿ ರೇಟ್ 30 ಶೇ.ಕ್ಕಿಂತಲೂ ಅಧಿಕವಿದೆ.
ದಿಲ್ಲಿಯಲ್ಲಿ ಲಾಕ್‍ಡೌನ್ ಅನ್ನು ಒಂದು ವಾರ ವಿಸ್ತರಿಸಲಾಗುವುದು ಎಂದು ಕೇಜ್ರಿವಾಲ್ ಟ್ವೀಟಿಸಿದ್ದಾರೆ.
ಕೊರೋನ ವೈರಸ್ ನಗರದಲ್ಲಿ ಈಗಲೂ ಆರ್ಭಟ ಮುಂದುವರಿಸಿದೆ. ಲಾಕ್ ಡೌನ್ ವಿಸ್ತರಿಸಬೇಕೆನ್ನುವುದು ಜನರ ಅಭಿಪ್ರಾಯವಾಗಿದೆ. ಹೀಗಾಗಿ ಲಾಕ್ ಡೌನ್ ಅನ್ನು ಒಂದು ವಾರ ವಿಸ್ತರಿಸಲಾಗುವುದು ಎಂದು ಕಳೆದ ವಾರವೇ ಕೇಜ್ರಿವಾಲ್ ತಿಳಿಸಿದ್ದರು.
Next Story





