ಕಾಸರಗೋಡು : 1006 ಮಂದಿಗೆ ಕೊರೋನ ಪಾಸಿಟಿವ್

ಕಾಸರಗೋಡು : ಜಿಲ್ಲೆಯಲ್ಲಿ ಶನಿವಾರವೂ ಕೊರೋನ ಸೋಂಕಿತರ ಸಂಖ್ಯೆ ಸಾವಿರ ಗಡಿ ದಾಟಿದೆ. 1006 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, 93 ಮಂದಿ ಗುಣಮುಖರಾಗಿದ್ದಾರೆ.
ಚಿಕಿತ್ಸೆಯಲ್ಲಿರುವವರ ಸಂಖ್ಯೆ 10,279ಕ್ಕೆ ತಲಪಿದೆ. ಇದುವರೆಗೆ 48,830 ಮಂದಿಗೆ ಸೋಂಕು ದೃಢಪಟ್ಟಿದ್ದು, 38,191 ಮಂದಿ ಗುಣಮುಖರಾಗಿದ್ದಾರೆ. 12,555 ಮಂದಿ ನಿಗಾದಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





