ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಜಗದೀಶ್ ಲಾಡ್ ಕೋವಿಡ್ ನಿಂದ ಮೃತ್ಯು

ಜಗದೀಶ್ ಲಾಡ್ (Twitter)
ಮುಂಬೈ: ಖ್ಯಾತ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಹಾಗೂ ಫಿಟ್ನೆಸ್ ಕೋಚ್ ಆಗಿದ್ದ ಜಗದೀಶ್ ಲಾಡ್ ಕೋವಿಡ್ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ 34 ವಯಸ್ಸಾಗಿತ್ತು. ಅವರು 'ಭಾರತ ಶ್ರೀ' ಬಿರುದು ಪಡೆದಿದ್ದರು.
ಕೆಲ ವರ್ಷಗಳ ಹಿಂದೆ ಜಗದೀಶ್ ಕಾರ್ಯನಿಮಿತ್ತ ನವಿ ಮುಂಬೈನಿಂದ ಬರೋಡಾಗೆ ವರ್ಗಾವಣೆಗೊಂಡಿದ್ದರು. ಅಲ್ಲಿ ಜಿಮ್ ಒಂದರಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಲಾಡ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿನ್ನದ ಪದಕ ಪಡೆದು 'ಮಿಸ್ಟರ್ ಇಂಡಿಯಾ' ಸಾಧನೆಗೈದಿದ್ದರು.
ಅವರು ಬಾಡಿಬಿಲ್ಡಿಂಗ್ ನಲ್ಲಿ ಅಪ್ರತಿಮ ಸಾಧನೆಗೈ ದಿದ್ದರೂ ಆರ್ಥಿಕವಾಗಿ ತುಂಬಾ ಮುಗ್ಗಟ್ಟನ್ನು ಎದುರಿಸುತ್ತಿದ್ದರು. ಅವರಿಗೆ ತಮ್ಮ ಬಾಡಿಗೆಯನ್ನು ಪಾವತಿಸಲು ಹಣವಿರಲಿಲ್ಲ. ಅವರಿಗೆ ಸರಿಯಾದ ಚಿಕಿತ್ಸೆ ದೊರಕದೆ ಅವರು ಮೃತಪಟ್ಟಿದ್ದಾರೆ. ಸದ್ಯ ಬಾಡಿ ಬಿಲ್ಡರ್ ಗಳ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದು ಅವರ ಸ್ನೇಹಿತ ಹಾಗೂ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ ಸಮೀರ್ ದುಃಖದಿಂದ ಹೇಳುತ್ತಾರೆ. ಜಗದೀಶ್ ಲಾಡ್ ಪತ್ನಿ ಹಾಗೂ ಮಗಳನ್ನು ಅಗಲಿದ್ದಾರೆ.





