ಮದ್ರಾಸ್ ಹೈಕೋರ್ಟ್ ಛೀಮಾರಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಚುನಾವಣಾ ಆಯೋಗ

ಹೊಸದಿಲ್ಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ಚುನಾವಣೆಯನ್ನು ಆಯೋಜಿಸಿರುವುದಕ್ಕೆ ಮದ್ರಾಸ್ ಹೈಕೋರ್ಟ್ ನಿಂದ ನಿರ್ದಯ, ಅವಹೇಳನಕಾರಿ ಛೀಮಾರಿ ಎದುರಿಸಿದ್ದ ಚುನಾವಣಾ ಆಯೋಗವು ಇಂದು ಸುಪ್ರೀಂಕೋರ್ಟ್‍ಗೆ ದೂರು ನೀಡಿದೆ.
ಎಪ್ರಿಲ್ 26ರಂದು ನೀಡಿದ್ದ ತೀರ್ಪಿನಲ್ಲಿ ಮದ್ರಾಸ್ ಹೈಕೋರ್ಟ್, ಕೋವಿಡ್-19 ಸೋಂಕು ತೀವ್ರವಾಗಿ ಹರಡುತ್ತಿರುವ ವೇಳೆ ತಮಿಳುನಾಡು ಚುನಾವಣೆಯಲ್ಲಿ ರಾಜಕೀಯ ರ್ಯಾಲಿಗಳಿಗೆ ತಡೆ ಹೇರದ ಚುನಾವಣಾ ಆಯೋಗದ ವಿರುದ್ಧ ಬಹುಶಃ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಹೇಳಿತ್ತು.
ಜಸ್ಟಿಸ್ ಡಿವೈ ಚಂದ್ರಚೂಡ್ ಹಾಗೂ ಎಂಆರ್ ಶಾ ಅವರನ್ನೊಳಗೊಂಡ ಪೀಠ ಸೋಮವಾರ ಚುನಾವಣಾ ಆಯೋಗದ ಅರ್ಜಿಯನ್ನು ಆಲಿಸಲಿದೆ.
Next Story





