ಆಮ್ಲಜನಕ ಪೂರೈಸದಿದ್ದರೆ ನ್ಯಾಯಾಂಗ ನಿಂದನೆ ಆರೋಪ ಎದುರಿಸಬೇಕಾಗುತ್ತದೆ: ಕೇಂದ್ರಕ್ಕೆ ಹೈಕೋರ್ಟ್ ಎಚ್ಚರಿಕೆ

ಹೊಸದಿಲ್ಲಿ: ದಿಲ್ಲಿಗೆ ಸಾಕಷ್ಟು ಆಮ್ಲಜನಕ ಪೂರೈಕೆ ಸಿಗದಿದ್ದರೆ ನ್ಯಾಯಾಂಗ ನಿಂದನೆ ಆರೋಪ ಎದುರಿಸಬೇಕಾಗುತ್ತದೆ ಎಂದು ದಿಲ್ಲಿ ಹೈಕೋರ್ಟ್ ಶನಿವಾರ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ಆಕ್ಸಿಜನ್ ಒಂದು ಅಹಂಕಾರದ ವಿಚಾರವಾಗಿದೆ ಎಂದು ದಿಲ್ಲಿ ಸರಕಾರವು ಶನಿವಾರ ಕೇಂದ್ರದ ವಿರುದ್ದ ವಾಗ್ದಾಳಿ ನಡೆಸಿದೆ.
ದಿಲ್ಲಿಯು ಯಾವುದೇ ವಿಧಾನದಿಂದ ಶನಿವಾರ 490 ಮೆ.ಟನ್ ಆಮ್ಲಜನಕವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿತು. ನಮ್ಮ ಆದೇಶವನ್ನು ಪಾಲಿಸದಿದ್ದರೆ ಅದನ್ನುನಾವು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುತ್ತೇವೆ ಎಂದು ಹೇಳಿತ್ತು.
Next Story





