Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕೋವಿಡ್ ವ್ಯಾಕ್ಸಿನ್ ಪಡೆಯಲು ಜನರ...

ಕೋವಿಡ್ ವ್ಯಾಕ್ಸಿನ್ ಪಡೆಯಲು ಜನರ ನಿರಾಸಕ್ತಿ, ಸುಳ್ಳು ಸುದ್ದಿಗಳಿಂದ ಹೊರ ಬರುವಂತೆ ಭಟ್ಕಳ ವೈದ್ಯರ ಮನವಿ

ಎಂ.ಆರ್.ಮಾನ್ವಿಎಂ.ಆರ್.ಮಾನ್ವಿ1 May 2021 10:56 PM IST
share
ಕೋವಿಡ್ ವ್ಯಾಕ್ಸಿನ್ ಪಡೆಯಲು ಜನರ ನಿರಾಸಕ್ತಿ, ಸುಳ್ಳು ಸುದ್ದಿಗಳಿಂದ ಹೊರ ಬರುವಂತೆ ಭಟ್ಕಳ ವೈದ್ಯರ ಮನವಿ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಕೋವಿಡ್-19 ಸೋಂಕಿನ ಎರಡನೆ ಅಲೆಯು ತನ್ನ ಪ್ರಭಾವವನ್ನು ತೋರಿಸುತ್ತಿದ್ದು ಹಲವು ಕೋವಿಡ್ ಪ್ರಕರಣಗಳು ವರದಿಯಾಗುವುದರ ಜೊತೆಗೆ 2 ಸಾವುಗಳು ಸಂಭವಿಸಿವೆ. ಬೆಂಗಳೂರು ಮತ್ತಿತರ ಹೊರಜಿಲ್ಲೆಗಳಿಂದ ಬರುತ್ತಿರುವವರು ಸೋಂಕನ್ನು ಭಟ್ಕಳಕ್ಕೆ ತರುತ್ತಿದ್ದು ಕೂಡಲೆ ನಿಯಂತ್ರಿಸದಿದ್ದರೆ ಮುಂದೆ ಭಾರಿ ಕಷ್ಟ ಅನುಭವಿಸಬೇಕಾಗಬಹುದು ಎಂಬುದು ಕೋವಿಡ್ ಪ್ರಥಮ ಅಲೆಯ ಅನುಭವ ತೋರಿಸಿಕೊಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದಿಂದ ಕೊಡಲ್ಪಡುವ ಉಚಿತ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದರಿಂದ ಸೋಂಕಿನ ಪ್ರಭಾವವನ್ನು ಆದಷ್ಟು ಕಡಿಮೆಗೊಳಿಸುವುದಲ್ಲದೆ ಸಾವುಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದಾಗಿದೆ. ಆದರೆ ಭಟ್ಕಳದಲ್ಲಿ ಕೋವ್ಯಾಕ್ಸಿನ್ ಪಡೆದುಕೊಳ್ಳಲು ಜನರು ನಿರಾಸಕ್ತಿ ವಹಿಸುತ್ತಿದ್ದು ಇದುವೆರೆಗೆ ಕೇವಲ 12,946 ಮಂದಿ ಮಾತ್ರ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಭಟ್ಕಳ ತಾಲೂಕಿನ ಜನಸಂಖ್ಯೆಗೆ ಹೋಲಿಸಿದರೆ ವ್ಯಾಕ್ಸಿನ್ ಪಡೆದವರ ಸಂಖ್ಯೆ ತುಂಬಾ ವಿರಳ ಎನ್ನಬಹುದು. ಈ ನಿಟ್ಟಿನಲ್ಲಿ 'ವಾರ್ತಾಭಾರತಿ' ಭಟ್ಕಳದ ಖ್ಯಾತ ವೈದ್ಯರನ್ನು ಮಾತನಾಡಿದ್ದು ವ್ಯಾಕ್ಸಿನ್ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸು ಕಾರ್ಯಕ್ಕೆ ಕೈಹಾಕಿದೆ.

ಈ ಕುರಿತಂತೆ ಭಟ್ಕಳ ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಮಾತನಾಡಿದ್ದು, ಜನರು ವಿನಾಕರಣ ಹೆದರುತ್ತಿದ್ದಾರೆ. ವಾಟ್ಸಪ್‍ನಲ್ಲಿ ಬರುವ ಸಂದೇಶಗಳನ್ನೆ ಸತ್ಯವೆಂದು ಭಾವಿಸುವ ಜನರು ವ್ಯಾಕ್ಸಿನ್ ಪಡೆಯಲು ಹೆದರುತ್ತಿದ್ದಾರೆ. ವ್ಯಾಕ್ಸಿನ್ ಪಡೆಯುವುದರಿಂದ ಯಾವುದೇ ತೊಂದರೆ ಇಲ್ಲ. ಈಗ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ಸುಳ್ಳು ಸುದ್ದಿ, ತಪ್ಪು ಮಾಹಿತಿಗಳಿಂದ ದೂರವಿರಿ, ಸರ್ಕಾರಿ ಆಸ್ಪತ್ರೆಗೆ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.  

ಆಸ್ಪತ್ರೆಯ ಫಿಜಿಷಿಯನ್ ಆಗಿರುವ ಡಾ.ಲಕ್ಷ್ಮೀಶ್ ಮಾತನಾಡಿ ವ್ಯಾಕ್ಸಿನ್ ಕುರಿತು ಜನರಲ್ಲಿ ಸಾಕಷ್ಟು ಅಪನಂಬಿಕೆಗಳಿದ್ದು ಅದರಿಂದ ಹೊರಬರಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಇದನ್ನು ನೀಡಲಾಗುತ್ತಿದೆ. ಇದನ್ನು ಪಡೆದುಕೊಂಡರೆ ವಿವಿಧ ರೋಗಗಳು ಬರುತ್ತವೆ, ತುಂಬಾ ಸೈಡ್ ಎಫೆಕ್ಟ್ ಇದೆ ಎಂಬೆಲ್ಲ ವಿಷಯಗಳನ್ನು ಜನರು ತಲೆಯಲ್ಲಿ ತುಂಬಿಕೊಂಡಿದ್ದಾರೆ. ಇದೆಲ್ಲವೂ ಸುಳ್ಳು. ವ್ಯಾಕ್ಸಿನ್ ನಿಂದ ಯಾವುದೇ ತೊಂದರೆಗಳು ಇಲ್ಲ. ಸ್ವಲ್ಪ ಜ್ವರ, ಮೈಕೈ ನೋವು ಬರಬರಹುದು. ಇದು ಸಾಮಾನ್ಯ. ಇದರ ಹೊರತು ಪಡಿಸಿ ವ್ಯಾಕ್ಸಿನ್ ಪಡೆದವರಿಗೆ ಮತ್ತು ಪಡೆಯದೆ ಇದ್ದವರಿಗೆ ತುಂಬಾ ವ್ಯತ್ಯಾಸವಿದೆ ಎಂದರು. ಬಿಪಿ, ಶೂಗರ್, ಕಿಡ್ನಿ, ಮಹಿಳೆಯರ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡ ಇದನ್ನು ಪಡೆದುಕೊಳ್ಳಬೇಕು. ನನಗೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದೆ. ನಾನೂ ಕೂಡ ವ್ಯಾಕ್ಸಿನ್ ತೆಗೆದುಕೊಂಡಿದ್ದೇನೆ. ಆದರೂ ಕೂಡ ಇದು ನೂರಕ್ಕೆ ನೂರು ಕೆಲಸ ಮಾಡುತ್ತೇ ಎಂದು ಹೇಳಲ್ಲ ಎಂದರು.

ವೆಲ್ಫೇರ್ ಆಸ್ಪತ್ರೆಯ ಫಿಜಿಷಿಯನ್ ಡಾ.ಯಜ್ಞೇಶ್ ಕಿದಿಯೂರು ಮಾತನಾಡಿ, ವ್ಯಕ್ತಿನಲ್ಲಿ ಜ್ವರ ಮತ್ತು ದೇಹಕ್ಕೆ ನೋವು ಬರುತ್ತೇ. ಇದರಿಂದ ಯಾವುದೇ ತೊಂದರೆ ಇಲ್ಲ. ಇದು ನಿಮಗೆ 5-6 ತಿಂಗಳು ರಕ್ಷಣೆ ನೀಡುತ್ತೇ. ದಯವಿಟ್ಟು ಎಲ್ಲರೂ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಕರೆ ನೀಡಿದರು.

ಡೈಗ್ನೋಮೇಡ್ ನ ವೈದ್ಯ ಡಾ. ಅಬ್ದುಲ್ ಕದೀರ್ ಮಾತನಾಡಿ, ವ್ಯಾಕ್ಸಿನ್ ಹಾಕುವುದರಿಂದ ಕೊರೋನ ಬರುವುದಿಲ್ಲ ಎಂದು ಹೇಳಲಾಗದು. ಆದರೆ, ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಕೊರೋನ ತೀವ್ರತೆ ಕಡಿಮೆಯಾಗುತ್ತೆ. ಸಾವಿನ ಸಂಖ್ಯೆಯಲ್ಲೂ ತುಂಬ ಇಳಿಕೆ ಕಂಡು ಬರುತ್ತೆ, ಐಸಿಯುಗೆ ದಾಖಲಾಗುವ ಪರಿಸ್ಥಿತಿ ಉಂಟಾಗುವುದಿಲ್ಲ.  ಹಾಗಾಗಿ ವ್ಯಾಕ್ಸಿನ್ ಹಾಕಿಕೊಳ್ಳಿ ತಮ್ಮ ಜೀವ ಮತ್ತು ಸಮುದಾಯದ ಇತರರ ಜೀವ ಅತ್ಯಂತ ಬೆಲೆಯುಳ್ಳದ್ದಾಗಿದೆ ಎಂದರು.

ಲೈಫ್ ಕೇರ್ ಆಸ್ಪತ್ರೆಯ ಮೆಡಿಕಲ್ ಡೈರಕ್ಟರ್ ಡಾ.ಮುಹಮ್ಮದ್ ಯಾಸೀನ್ ಸೌದಾಗರ್, ಕೊರೋನ ಯಾವುದೇ ವಯಸ್ಸು ನೋಡಿ ಬರುವುದಿಲ. ಆದ್ದರಿಂದ ವ್ಯಾಕ್ಸಿನ್ ತೆಗೆದುಕೊಳ್ಳುವುದರಿಂದಾಗಿ ಈ ಸೋಂಕಿನಿಂದ ಉಳಿಯಬಹುದು. ಲೈಫ್ ಕೇರ್ ತಮ್ಮಲ್ಲಿ ವಿನಂತಿಸಿ ಕೊಳ್ಳುವುದೇನೆಂದರೆ ನಿಮ್ಮ ಸ್ನೇಹಿತರಿಗೆ ಕುಟುಂಬದ ಸದಸ್ಯರಿಗೆ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಪ್ರೇರೇಪಿಸಿ. ಸರ್ಕಾರದ ಈ ಅಭಿಯಾನದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡರು.

ಫಿಝಿಯೋಥೆರಪಿಸ್ಟ್ ಡಾ.ಅಶ್ವಿನ್ ಶೆಟ್ಟಿ ಮಾತನಾಡಿದ್ದು, ವ್ಯಾಕ್ಸಿನ್ ಹಾಕಿಕೊಳ್ಳುವುದು ಅತಿ ಅವಶ್ಯಕವಾಗಿದ್ದು ಇದರಿಂದ ಅಡ್ಡಪರಿಣಾಮ ಇಲ್ಲ. ಮುಂದೆ ಕೊರೋನ ಬಂದರೂ ಕೂಡ ಈ ವ್ಯಾಕ್ಸಿನ್ ನಿಂದ ಹೆಚ್ಚಿನ ತೊಂದರೆಯುಂಟಾಗುವುದಿಲ್ಲ ಎಂದರು.

ಲೈಫ್ ಕೇರ್ ಆಸ್ಪತ್ರೆಯ ಅರ್ತೋಪಿಡಿಕ್ಸ್ ವೈದ್ಯ ಡಾ. ಸಾಅದ್ ಮುಹಮ್ಮದ್ ಅಥಣಿಕರ್ ಮಾತನಾಡಿ, ವ್ಯಾಕ್ಸಿನ್ ಕುರಿತಂತೆ ಎಲ್ಲೆಡೆ ಸುಳ್ಳು ಸುದ್ದಿಗಳು ಹರಡಿಕೊಳ್ಳುತ್ತಿದ್ದು ಆರೋಗ್ಯವಂತ ಪ್ರತಿಯೊಬ್ಬ ವ್ಯಕ್ತಿಯೂ ಇದನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಯಾರಿಗೆ ತೊಂದರೆ ಇದೆಯೋ ಅವರು ವೈದ್ಯರ ಸಲಹೆ ಮೆರೆಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದರು.

share
ಎಂ.ಆರ್.ಮಾನ್ವಿ
ಎಂ.ಆರ್.ಮಾನ್ವಿ
Next Story
X